ಉಡುಪಿ: ಅಯೋಧ್ಯ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆಗೆ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಸ್ವಾಗತ ನೀಡಲಾಯಿತು.
ಅಯೋಧ್ಯ ಪ್ರಭು ಶ್ರೀರಾಮಚಂದ್ರ ಭವ್ಯ ಮಂದಿರದ ಪುನಃ ನಿರ್ಮಾಣ ಕಾರ್ಯವು ನಮ್ಮ ಹಿರಿಯರು ಶತ ಶತಮಾನಗಳಿಂದ ಮಾಡಿಕೊಂಡು ಬಂದ ಹೋರಾಟದ ಫಲವಾಗಿ ಇಂದು ಸಾಕಾರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಹಿಂದೂ ಸಮಾಜದ ಜಾಗೃತಿ ಹಾಗೂ ರಾಮ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಜಗದ್ಗುರು ಶ್ರೀ ಸತ್ಯಾನಂದ ಸರಸ್ವತಿ ಅವರ ಮಾರ್ಗದರ್ಶನ ಹಾಗೂ ಜಗದ್ಗುರು ಶ್ರೀ ಶಕ್ತಿ ಶಾಂತಾನಂದ ಮಹರ್ಷಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಶ್ರೀರಾಮದಾಸ ಆಶ್ರಮದಲ್ಲಿ ಆಯೋಜಿಸಲಾಗಿರುವ ಈ ದಿಗ್ವಿಜಯ ರಥಯಾತ್ರೆ ವಿಶ್ವ ಹಿಂದೂ ಪರಿಷತ್ತು ಅಖಿಲ ಭಾರತೀಯ ಸಂತ ಸಮಿತಿ ಇವುಗಳ ಬೆಂಬಲದೊಂದಿಗೆ ದೇಶದಾದ್ಯಂತ ನಡೆಯುತ್ತಿದ್ದು, ಇಂದು ದಿನಾಂಕ 07-11-2022 ರಂದು ಕಲ್ಯಾಣಪುರ ಸಂತೆಕಟ್ಟೆ ತಲುಪಿದೆ.
ಗಣ್ಯರೊಂದಿಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಅಯೋಧ್ಯ ಪ್ರಭು ಶ್ರೀರಾಮಚಂದ್ರ ದೇವರ ದಿಗ್ವಿಜಯ ರಥಯಾತ್ರೆಯನ್ನು ಸ್ವಾಗತಿಸಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಯಾತ್ರೆ 60 ದಿನಗಳ ಕಾಲ 27 ರಾಜ್ಯಗಳಲ್ಲಿ ಒಟ್ಟು 15000 ಕಿ.ಮೀ ಕ್ರಮಿಸಿ ಗೀತಾ ಜಯಂತಿಯಂದು ಸಮಾಪನಗೊಳ್ಳಲಿದೆ.