ಬೆಂಗಳೂರು: ಇತ್ತ ರಾಜಧಾನಿ ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ ನಡೆದಿರುವಂತೆಯೇ, ಅತ್ತ ಸಂಸತ್ ಆವರಣದಲ್ಲೂ ನಾಡಪ್ರಭುವಿನ ಪುತ್ಥಳಿ ಅನಾವರಣ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ಈ ಸಂಬಂಧ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಂಸತ್ತಿನ ಆವರಣದಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಸ್ಥಾಪಿಸುವಂತೆ ಎಚ್.ಡಿ. ದೇವೇಗೌಡರು ಈ ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.
ಕೆಂಪೇಗೌಡರು ರೂಪಿಸಿದ ಈ ಬೆಂಗಳೂರು ನಗರ ತಂತ್ರಜ್ಞಾನದ ಲಾಂಛನವಾಗಿದೆ. ಇಲ್ಲಿನ ರೀತಿಯ ತಂತ್ರಜ್ಞಾನದ ಸಂಸ್ಥೆಗಳು ದೇಶದ ಬೇರೆ ಯಾವ ನಗರದಲ್ಲೂ ಇಲ್ಲ ಎಂದು ಪ್ರಧಾನಿಯವರ ಗಮನಸೆಳೆದಿರುವ ದೇವೇಗೌಡರು, ಈ ಬೆಂಗಳೂರಿನ ನಿರ್ಮತೃ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.
ಇದೇ ಪತ್ರದಲ್ಲಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಕೇಂದ್ರ ಸಮಿತಿಯು ಪ್ರಧಾನಿಯವರಿಗೆ ಸಲ್ಲಿಸಿರುವ ಮನವಿಯನ್ನು ತಮ್ಮ ಪತ್ರದಲ್ಲಿ ದೇವೇಗೌಡರು ಉಲ್ಲೇಖಿಸಿದ್ದಾರೆ.
I have forwarded the request of the Bangalore Founder Kempegowda Central Committee to the Prime Minister with my personal recommendation. pic.twitter.com/7sxhiic8Sx
— H D Deve Gowda (@H_D_Devegowda) November 6, 2022



















































