ದೆಹಲಿ : ಗುರುವಾರ ನಡೆದ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪೈಕಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಉಪ ಚುನಾವಣೆಯ ಮತಗಳ ಎಣಿಕೆ ಭಾನುವಾರ ನಡೆದಿದ್ದು ಬಿಜೆಪಿ 4 ಕಡೆ ಜಯಗಳಿಸಿದೆ. ಯೋಗಿಯ ನಾಡಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಬೆಂಬಲಿಗ ಜಯಭೇರಿ ಭಾರಿಸಿದ್ದಾರೆ.
ಫಲಿತಾಂಶ ಹೀಗಿದೆ:
ಆದಂಪುರ (ಹರಿಯಾಣ) – ಬಿಜೆಪಿ
ಗೋಲ ಗೋಕರ್ಣನಾಥ (ಉತ್ತರ ಪ್ರದೇಶ)- ಬಿಜೆಪಿ
ಧಮ್‌ನಗರ (ಒಡಿಶಾ) – ಬಿಜೆಪಿ
ಗೋಪಾಲ್‌ಗಂಜ್ (ಬಿಹಾರ) – ಬಿಜೆಪಿ
ಮೊಕಾಮಾ (ಬಿಹಾರ) – ಆರ್‌ಜೆಡಿ
ಮುನುಗೋಡು (ತೆಲಂಗಾಣ) – ಟಿಆರ್‌ಎಸ್
ಅಂಧೇರಿ ಪೂರ್ವ (ಮಹಾರಾಷ್ಟ್ರ)- ಶಿವಸೇನೆ, ಉದ್ಧವ್ ಠಾಕ್ರೆ ಬಣ























































