ಬೆಂಗಳೂರು: ದೇಶವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ರಾಜಕೀಯ ನಾಯಕರ ಕೆಸರೆರಚಾಟ ತೀವ್ರಗೊಂಡಿದೆ. ಇದೀಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ತಿರುಗಿಬಿದ್ದಿರುವ ಕಾಂಗ್ರೆಸ್, ಕಾರ್ಯಕ್ರಮವೊಂದರಲ್ಲಿನ ಧ್ವಜ ಸನ್ನಿವೇಶದ ಚಿತ್ರಗಳನ್ನು ಮುಂದಿಟ್ಟು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಈಶ್ವರಪ್ಪ ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿದ್ದರು, ಬಿ.ಸಿ ನಾಗೇಶ್ ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜವನ್ನು ಕುಗ್ಗಿಸಿದ್ದಾರೆ. ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೇ?’ ಎಂದು ಪ್ರಶ್ನಿಸಿದೆ.
ಸಿಎಂಗೆ ತಿರಂಗಾ ಮೇಲೆ ಗೌರವ ಇದ್ದಿದ್ದೇ ಆದರೆ ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಲಿ ಎಂದು ಸವಾಲು ಹಾಕಿದೆ.
ಈಶ್ವರಪ್ಪ ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿದ್ದರು, ಬಿ.ಸಿ ನಾಗೇಶ್ ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜವನ್ನು ಕುಗ್ಗಿಸಿದ್ದಾರೆ.
ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೇ ಇದು @BJP4Karnataka?
ಸಿಎಂಗೆ ತಿರಂಗಾ ಮೇಲೆ ಗೌರವ ಇದ್ದಿದ್ದೇ ಆದರೆ ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಲಿ. pic.twitter.com/D2Xcvl3560
— Karnataka Congress (@INCKarnataka) August 12, 2022
ಕಾಂಗ್ರೆಸ್ ಆಗ್ರಹಕ್ಕೆ ಟ್ವಿಟರ್ ಮೂಲಕವೇ ಎದಿರೇಟು ನೀಡಿರುವ ಸಚಿವ ಬಿ.ಸಿ.ನಾಗೇಶ್, ‘ರಾಷ್ಟ್ರಧ್ವಜದ ಬಣ್ಣಗಳೇ ತಿಳಿಯದವರು, ದಿಕ್ಕು ತಪ್ಪಿಸಲೆಂದೇ ಒಂದು ಚಿತ್ರವನ್ನು ಬಳಸಿಕೊಂಡು ಸುಳ್ಳಿನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಹತಾಶೆಯಿಂದ ಸುಳ್ಳು ಹೇಳುವುದನ್ನೆ ಅವರು ಅಜೆಂಡಾ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಆದರೆ, ಈ ನೈಜ ಚಿತ್ರಗಳು ಅವರ ಹಸಿ ಹಸಿ ಸುಳ್ಳುಗಳನ್ನು ಬಯಲು ಮಾಡುತ್ತವೆ ಎಂದುಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರಧ್ವಜದ ಬಣ್ಣಗಳೇ ತಿಳಿಯದವರು, ದಿಕ್ಕು ತಪ್ಪಿಸಲೆಂದೇ ಒಂದು ಚಿತ್ರವನ್ನು ಬಳಸಿಕೊಂಡು ಸುಳ್ಳಿನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಹತಾಶೆಯಿಂದ ಸುಳ್ಳು ಹೇಳುವುದನ್ನೆ ಅವರು ಅಜೆಂಡಾ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ಆದರೆ, ಈ ನೈಜ ಚಿತ್ರಗಳು ಅವರ ಹಸಿ ಹಸಿ ಸುಳ್ಳುಗಳನ್ನು ಬಯಲು ಮಾಡುತ್ತವೆ. pic.twitter.com/6Yw49UZxum
— B.C Nagesh (Modi Ya Parivara) (@BCNagesh_bjp) August 11, 2022























































