ಮಂಡ್ಯ: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಬಂಧಿತರೆಲ್ಲರೂ ಪ್ರಮುಖ ಆರೋಪಿಗಳು. ಅವರ ತೀವ್ರ ವಿಚಾರಣೆಯಾಗುತ್ತಿದೆ. ಅದರ ಹಿಂದಿರುವ ದೊಡ್ಡ ಷಡ್ಯಂತರದ ಬಗ್ಗೆಯೂ ವಿಚಾರಣೆಯಾಗುತ್ತಿದೆ. ಈ ಎಲ್ಲಾ ಮಾಹಿತಿಯನ್ನು ಎನ್.ಐ.ಎ ಗೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.























































