ಶಿವಮೊಗ್ಗ: ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೇರವೇರಿಸಿಕೊಟ್ಟ ಪರಮಪೂಜ್ಯ ಬ್ರಹ್ಮ ಶ್ರೀ ನಾರಾಯಣ ಗುರುಗಳ ಗುರುಪೂಜೆಯು ಭಾನುವಾರ ಸಂಜೆ ಶ್ರೀ ಸಿಗಂದೂರು ಚೌಡಮ್ಮ ದೇವಿಯ ಕ್ಷೇತ್ರದಲ್ಲಿ ನೇರವೇರಿತು.
ಸುದೀರ್ಘ ಭಜನೆ, ಮಂತ್ರಪೂಜೆ,ಅಲಂಕಾರ ಪೂಜೆ, ವಿವಿಧ ಪುಷ್ಪಾಲಂಕಾರ ಪೂಜೆ,ಪ್ರಸಾದ ನೈವೇದ್ಯ, ಮಹಾಮಂಗಳಾರತಿ, ಜಯಘೋಷಾದೊಂದಿಗೆ
ವಿಜೃಂಭಣೆಯಿಂದ ದೇಶದ ಶಕ್ತಿ,ಸಂಘಟನೆ, ಧಾರ್ಮಿಕ, ದಾರ್ಶನಿಕ, ದೈವತ್ವದ ಗುರದೇವರ ಪಾದಾಪೂಜೆ ಸಿಗಂದೂರು ಕ್ಷೇತ್ರದ ಪ್ರಧಾನ ಕಾರ್ಯದ ರವಿಕುಮಾರ್ ಹೆಚ್.ಆರ್. ಅವರ ಉಸ್ತುವಾರಿಯಲ್ಲಿ ನೆರವೇರಿತು. ಆರಾಧನಾ ಕಾರ್ಯ ಗಮನಸೆಳೆಯಿತು.
ದೇವಾಲಯದ ಗರ್ಭಗುಡಿಯ ಒಳ ಪ್ರವೇಶವನ್ನು ಪ್ರಪ್ರಥಮ ಬಾರಿಗೆ ತಮ್ಮ ಮನೆದೇವರಿಗೆ ತಾವೇ ಮಹಾಮಂಗಳಾರತಿಯನ್ನು ಮಾಡಿದ್ದು ಈ ಜಾತ್ರಾ ಮಹೋತ್ಸವದ ವಿಶೇಷ ವಾಗಿತ್ತು.ಈ ಕಾರ್ಯವನ್ನು ನೇರವೇರಲು ಮಾರ್ಗದರ್ಶನ ಮತ್ತು ಗುರು ಸಾನಿಧ್ಯವಹಿಸಿದ್ದು, ಹಿರಿಯ ಗುರುಗಳು, ದಕ್ಷಿಣದ ಅಯೋದ್ಯೆ ಎಂದೇ ಕರೆಸಿಕೊಳ್ಳುವ
ಕನ್ಯಾಡಿ ಕ್ಷೇತ್ರದ ಮಹಾಗುರುಗಳಾದ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮಿಗಳು. ಅವರು ಸಹಿತ ಗರ್ಭಗುಡಿ ಪ್ರವೇಶ ಮಾಡುವಂತೆ ಅನುಗ್ರಹಿಸಿ ತಾವು ಪ್ರವೇಶ ಮಾಡಿ ಶ್ರೀ ತಾಯಿಗೆ ಮಹಾ ಆರತಿ ಮಾಡಿದರು.ಎರಡೂ ದಿನಗಳ ಕಾಲ ಇದ್ದು, ಶ್ರೀಗಳ ಮಾರ್ಗದರ್ಶನ ದೊಂದಿಗೆ ಜಾತ್ರಾ ಕಾರ್ಯ ನೇರವೇರಿತು.
ಎರಡು ದಿನಗಳ ಜಾತ್ರೆ ನಾರಾಯಣ ಗುರುಗಳ ಆದರ್ಶ ಪಾಲಿಸುತ್ತಾ, ಕನ್ಯಾಡಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನೇರವೇರಿತು.ಈ ಹಿಂದೆ ಗರ್ಭಗುಡಿಯ ಒಳಗೆ ಪೂಜ್ಯರಿಗೆ ವೈದಿಕ ಸಂಪ್ರದಾಯ ವಾದಿಗಳು ಒಳ ಪ್ರವೇಶ ನೀಡದಿರುವುದು. ಗುರುವಿನ ಕರುಣದಯದಲ್ಲಿ ನೇರವೇರಿದ್ಧು, ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ಇರುವ ದೈವಿಕ ಶಕ್ತಿಗೆ ಒಂದು ಶ್ರೇಷ್ಠ ಉದಾಹರಣೆ ಯಾಗಿದೆ ಎಂದು ಭಕ್ತರು ಸಂತಸ ಹಂಚಿಕೊಂಡಿದ್ದಾರೆ.