ಬೆಂಗಳೂರು: ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣ ಎಂದು ಕಾಂಗ್ರೆಸ್ ಬೊಟ್ಟು ಮಾಡುತ್ತಿರುವ ಬಿಟ್ ಕಾಯಿನ್ ಕರ್ಮಕಾಂಡದಲ್ಲಿ ಬಿಜೆಪಿ ಇದೀಗ ಸ್ಫೋಟಕ ಸಂಗತಿಯನ್ನು ಅನಾವರಣ ಮಾಡಿದೆ. ಬಿಟ್ ಕಾಯಿನ್ ಕರ್ಮಕಾಂಡದಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪ್ಪಾಡ್ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಈ ಕುರಿತ ದಾಖಲೆಯೊಂದನ್ನು ಬಿಜೆಪಿ ಬಹಿರಂಗಪಡಿಸಿದೆ. ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸುರ್ಜಿವಾಲ ಅವರು ಶನಿವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಬಿಜೆಪಿ ಸರ್ಕಾರ ಭಾರೀ ಮೊತ್ತದ ಹಗರಣ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಸುರ್ಜಿವಾಲ ಅವರ ಆರೋಪಗಳಿಗೆ ಚುಟುಕಾಗಿಯೇ ಪ್ರತಿಕ್ರಿಯಿಸಿರುವ ಬಿಜೆಪಿ, ದಾಖಲೆಯೊಂದನ್ನು ಟ್ಯಾಗ್ ಮಾಡಿದೆ. ‘ಸುರ್ಜೇವಾಲಾ ಅವರೇ, ನೀವು ಪತ್ರಿಕಾಗೋಷ್ಠಿಯಲ್ಲಿ ಇದೊಂದು ದಾಖಲೆ ಬಿಟ್ಟಿಬಿಟ್ಟಿರಿ. ಶ್ರೀಕಿ, ಕಾಂಗ್ರೆಸ್ ಮುಖಂಡರ ಜತೆ ಹೊಂದಿದ ನಂಟಿನ ಬಗ್ಗೆ ಮೌನವೇಕೆ? ಈ ದಾಖಲೆಯನ್ನು ಸಾರ್ವಜನಿಕರ ಮುಂದೆ ಇಡುವ ಧೈರ್ಯ ತೋರುವಿರಾ? ಎಂದೂ ಪ್ರಶ್ನಿಸಿದೆ.
ಸುರ್ಜೇವಾಲಾ ಅವರೇ,
ನೀವು ಪತ್ರಿಕಾಗೋಷ್ಠಿಯಲ್ಲಿ ಇದೊಂದು ದಾಖಲೆ ಬಿಟ್ಟಿಬಿಟ್ಟಿರಿ.
ಶ್ರೀಕಿ ಕಾಂಗ್ರೆಸ್ ಮುಖಂಡರ ಜತೆ ಹೊಂದಿದ ನಂಟಿನ ಬಗ್ಗೆ ಮೌನವೇಕೆ?ಈ ದಾಖಲೆಯನ್ನು ಸಾರ್ವಜನಿಕರ ಮುಂದೆ ಇಡುವ ಧೈರ್ಯ ತೋರುವಿರಾ?#CONgressFakeNewsFactory pic.twitter.com/oLDNCqqPNZ
— BJP Karnataka (@BJP4Karnataka) November 13, 2021