ಬೆಂಗಳೂರು: ಸಾಮಾಜಿಕ ಕಳಕಳಿಯ ವಿಚಾರಗಳಲ್ಲಿ ಸದಾ ಮುಂಚೂಣಿಯಲ್ಲಿರುವ, ಸಾಮಾಜಿಕ ಪಿಡುಗುಗಳ ವಿರುದ್ದ ಆಗಾಗ್ಗೆ ಧ್ವನಿ ಎತ್ತುತ್ತಿರುವ ಈ ಯುವ ನಾಯಕಿ, ಇದೀಗ ಮಹಿಳೆಯರಿಗೆ ಕಿರುಕುಳ ನೀಡುವ ಮರ್ಕಟ ಮನಸ್ಸಿನ ಮಂದಿ ವಿರುದ್ದ ಸಿಡಿದೆದ್ದಿದ್ದಾರೆ. ಕೆಪಿಸಿಸಿ ವಕ್ತಾರೆಯಾಗಿರುವ ಭವ್ಯ ನರಸಿಂಹಮೂರ್ತಿ ಅವರು ಮಾಡಿದ ಟ್ವೀಟ್ ಇದೀಗ ರಾಜ್ಯವ್ಯಾಪಿ ಸಂಚಲನ ಸೃಷ್ಟಿಸಿದೆ.
Saw couple of women writing about the harassment from @rational_sapien .Remembered he had sent creepy messages to me as well. Did not think he is a habitual offender n that he will bother other women. Else I would have exposed him long back. Here is screenshot of his messages 1/5 pic.twitter.com/MwvAotBjZa
— Bhavya Narasimhamurthy (@Bhavyanmurthy) October 1, 2021
ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುವ ಕೀಚಕರ ಕೃತ್ಯಗಳು ನಡೆಯುತ್ತಲೇ ಇವೆ. ಈ ರೀತಿಯ ಸಂದೇಶಗಳು ಭವ್ಯ ನರಸಿಂಹಮೂರ್ತಿ ಅವರಿಗೂ ಎದುರಾಗಿತ್ತಂತೆ. ಇತ್ತೀಚಿನ ದಿನಗಳಲ್ಲಿ ಯುವತಿಯರಿಗೆ ಹೆಚ್ಚೆಚ್ಚು ಸಂದೇಶಗಳು ಬರುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಈ ಕೆಪಿಸಿಸಿ ವಕ್ತಾರೆ ಭವ್ಯಾ ಅವರು ಸಿಡಿದೆದ್ದಿದ್ದಾರೆ. ಮೌನವಾಗಿಯೇ ಟ್ವೀಟಾಸ್ತ್ರ ಪ್ರಯೋಗಿಸಿ ಭಾರೀ ಸುದ್ದಿ ಎಬ್ಬಿಸಿದ್ದಾರೆ.
I had just blocked him after seeing so many messages in my message request box …. 2/5 pic.twitter.com/8xVpmIkrYP
— Bhavya Narasimhamurthy (@Bhavyanmurthy) October 1, 2021
ಏನಿದು ಟ್ವೀಟ್..?
ಮಹಿಳೆಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಡುವ ಕಿರುಕುಳದ ಕೃತ್ಯಗಳು ನಡೆಯುತ್ತಲೇ ಇವೆ. ಇಂಥದ್ದೇ ಸಂದೇಶ ಭವ್ಯ ಅವರಿಗೂ ಬರುತ್ತಿದ್ದವಂತೆ. ಆರಂಭದಲ್ಲಿ ಭಯ ಹಾಗೂ ಸಂಕೋಚದ ಹಿನ್ನೆಲೆಯಲ್ಲಿ ಈ ಸಂದೇಶ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಆದರೆ ಸಂದೇಶ ಮಿತಿ ಮೀರಿದಾಗ ಆ ನಂಬರನ್ನೇ ಬ್ಲಾಕ್ ಮಾಡಿದ್ದರು. rational_sapien ಎಂಬ ಹೆಸರಲ್ಲಿನ ಸಂದೇಶ ಅದಾಗಿತ್ತು. ಇಂತಹಾ ಕೃತ್ಯ ಬೇರೆ ಮಹಿಳೆಯರ ಮೇಲೂ ಪ್ರಯೋಗವಾದ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ, ಭವ್ಯ ನರಸಿಂಹಮೂರ್ತಿ ಅವರು ಟ್ವೀಟ್‌ನ ಅಖಾಡಕ್ಕೆ ಧುಮುಕಿದ್ದಾರೆ. ತನಗೆ ಬಂದಿದ್ದ ಕಿರುಕುಳದ ಸಂದೇಶಗಳ ಸ್ಕ್ರೀನ್ ಶಾಟ್‌ಗಳೊಂದಿಗೆ ಟ್ವೀಟ್ ಮಾಡಿ ಮರ್ಕಟ ಮನಸಿನ ಅಶ್ಲೀಲ ಶೂರರಿಗೆ ಎಚ್ಚರಿಕೆಯ ಸಂದೇಶವನ್ನು ಹರಿಯಬಿಟ್ಟಿದ್ದಾರೆ.
4/5 pic.twitter.com/3HJ6KPzK35
— Bhavya Narasimhamurthy (@Bhavyanmurthy) October 1, 2021
5/5 pic.twitter.com/eDutOJgXOB
— Bhavya Narasimhamurthy (@Bhavyanmurthy) October 1, 2021
ಕೊಪ್ಪಳದಲ್ಲಿ ಇತ್ತೀಚೆಗೆ ದಲಿತ ಸಮುದಾಯದ ಮಗು ದೇವಾಲಯ ಪ್ರವೇಶಿಸಿದ ಸಂಬಂಧ ವಿವಾದ ಉಂಟಾದಾಗ ಸಿಡಿದೆದ್ದು ಸುದ್ದಿಯಾಗಿದ್ದ ಈ ಕಾಂಗ್ರೆಸ್ ವಕ್ತಾರೆ, ಈ ಬಾರಿ ಹೆಣ್ಣು ಮಕ್ಕಳಿಗಾಗುತ್ತಿರುವ ಈ ಅನ್ಯಾಯದ ವಿರುದ್ದ ಸಮರ ಸಾರಿದ್ದಾರೆ. ಇವರ ಈ ಹೋರಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.