ಬೈಂದೂರು : ಕಳೆದ ಹಲವು ತಿಂಗಳುಗಳಿಂದ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೋ ಕಳ್ಳತನ ಪ್ರಕರಣಗಳು ಪೊಲೀಸರಿಗೆ ಸವಾಲೆಂಬಂತಾಗಿದೆ. ಈ ಹಿನ್ನಲೆಯಲ್ಲಿ ಬೈಂದೂರು ವ್ರತ್ತ ನೀರಿಕ್ಷಕ ಸಂತೋಷ ಕಾಯ್ಕಿಣಿ ಮಾರ್ಗದರ್ಶನದೊಂದಿಗೆ ಪಿ.ಎಸ್.ಐ ಪವನ್ ನಾಯಕ್ ನೇತ್ರೃತ್ವದಲ್ಲಿ ವಿಶೇಷ ಪರೇಡ್ ನಡೆಸಲಾಯಿತು.
ಬೈಂದೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಈ ಹಿಂದೆ ಜಾನುವಾರು ಕಳವು ಮತ್ತು ಅಕ್ರಮ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ್ದ ಹಾಗೂ ದನದ ದಲ್ಲಾಳಿಗಳನ್ನು ಠಾಣೆಗೆ ಕರೆಯಿಸಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು. ಕಾನೂನು-ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಉತ್ತಮ ಜೀವನ ನಡೆಸುವಂತೆ ಎಚ್ಚರಿಕೆ ನೀಡಿ ಪೆರೇಡ್ ನಡೆಸಲಾಯಿತು.