ಬೆಂಗಳೂರು: ನಾನು ಗಾಂಧಿಜಿಯವರ ತತ್ವ, ಸಿದ್ದಾಂತ ಗಳ ಬಗ್ಗೆ ಮಾತಾಡೊಲ್ಲ, ನನಗೆ ಅರ್ಹತೆ ಇಲ್ಲ. ನಾವೆಲ್ಲಾ ಅದನ್ನ ಗಾಂಧೀಜಿ ಅವರ ತತ್ವ, ಸಿದ್ದಾಂತ ಗಳನ್ನ ಪಾಲನೆ ಮಾಡದವರು, ಅವರ ಹೆಸರನ್ನ ಹೇಳೋ ಅರ್ಹತೆಯನ್ನು ಕಳೆದುಕೊಂಡಿದ್ದೇವೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸಾಕಷ್ಟು ವರ್ಷ ಕಾಂಗ್ರೆಸ್ ಅಧಿಕಾರ ಮಾಡಿದೆ, ಆದರೆ ಹಿಂದಿಗಿಂತಲೂ ಇಂದು ಕಾಂಗ್ರೆಸ್ ಅಧಿಕಾರ ಹಿಡಿಯೋದು ಅನಿವಾರ್ಯವಾಗಿದೆ. ಕಾಂಗ್ರೆಸ್ ಸಾಕಷ್ಟು ವರ್ಷ ಅಧಿಕಾರ ಮಾಡಿದೆ, ಒಳ್ಳೆಯದೂ ಮಾಡಿದೆ, ಕೆಲವು ತಪ್ಪುಗಳನ್ನು ಮಾಡಿದ್ದೆ ಎಂದರು.
ನಮ್ಮಲ್ಲೂ ಕೆಲವರು ಸ್ವಾರ್ಥಿಗಳು ಇದ್ದೇವೆ. ಆದರೆ ಇಂದಿನ ಬಿಜೆಪಿ ಆಡಳಿತ ದೇಶವನ್ನು ಗಂಡಾಂತರದತ್ತ, ಅಪಾಯಕಾರಿ ಯತ್ತ ಕೊಂಡೊಯ್ತಾ ಇದೆ. ಅದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯ ವಾಗಿದೆ. ಬಿಜೆಪಿಯವರು ಮಾತು ಎತ್ತಿದ್ರೆ ದೇಶ ರಕ್ಷಣೆ, ದೇಶ ಭಕ್ತಿ ಅಂತ ಮಾತಾಡ್ತಾರೆ, ಬಿಜೆಪಿ ಅಧಿಕಾರಕ್ಕೆ ಬಂದ್ಮೆಲೆ ಚೀನಾ ನಮ್ಮ ನೆಲದಲ್ಲಿ ರಸ್ತೆ, ಬಂಕರ್ ಮಾಡ್ತಾ ಇವೆ. ಅದರ ಬಗ್ಗೆ ಬಿಜೆಪಿ ಅವರಿಗೆ ಅರಿವೇ ಇಲ್ಲ, ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್ ಸಿ.ಜೆ , ನ್ಯಾಯಾಧೀಶರು, ಮಾಧ್ಯಮದವರ ಮೇಲೆ ಗೂಡಾಚಾರಿಕೆ, ಮಾಡ್ತಾ, ಅವರು ಏನ್ಮಾತಾಡ್ತಾರೆ, ಇವರು ಏನ್ಮಾಡ್ತಾರೆ ಅಂತ ಕದ್ದು ಕೇಳೋದೆ ಆಯ್ತು, ಇವರು ದೇಶದ ಸ್ವಾತಂತ್ರ್ಯದ ಬಗ್ಗೆ ಮಾತಾಡ್ತಾರೆ. ಪಾಕಿಸ್ತಾನ, ಚೀನ ಏನ್ಮಾಡ್ತಾ ಇದೆ ಅನ್ನೋದರ ಬಗ್ಗೆ ಗಮನ ಹರಿಸ್ತಿಲ್ಲ ಎಂದರು.
ಬಡವರ ಹೊಟ್ಟೆ ಮೇಲೆ ಹೊಡೆದು ಬಲ್ಲಿಗರ ಹೊಟ್ಟೆ ತುಂಬಿಸ್ತಾ ಇದೆ. ಸಿಮೆಂಟ್, ಅನ್ನ, ಎಣ್ಣೆ, ಡೀಸೆಲ್, ಪೆಟ್ರೋಲಿಯಂ ಉತ್ಪನ್ನಗಳು ಮೇಲೆ ತೆರಿಗೆ ಹೆಚ್ಚಿಸಿ ಬಡವರ ಹೊಟ್ಟೆ ಮೇಲೆ ಹೊಡೀತಾ ಇದೆ. ಅದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಬಿಜೆಪಿಯವರ ಯೋಗ್ಯತೆಗೆ ದೇಶದ ಭದ್ರತೆ ಮಾಡೋ ಶಕ್ತಿ ಇಲ್ಲ, ಚೀನಾ ನಮ್ಮದೆ ನೆಲದಲ್ಲಿ ಹೊಸ ನಗರ ನಿರ್ಮಿಸ್ತಾ ಇದ್ರೂ ಪ್ರಶ್ನೆ ಮಾಡಲಾಗದ ನಾಲಾಯಕ್ ನವರು ಬಿಜೆಪಿಗರು ಎಂದವರು ಹೇಳಿದರು.
ನಾವು ಬರಿ ಭಾಷಣ ಮಾಡಬಹುದು, ಕಾಂಗ್ರೆಸ್ ಅಧಿಕಾರಕ್ಕೆ ತರುವುದು ಜನ ಸಾಮಾನ್ಯರ ಕೈಯಲ್ಲಿ ಇದೆ. ದೇಶದಕ್ಕೆ ಮಾರಕವಾದ ಬಿಜೆಪಿ ತೊಲಗಿಸುವ ಶಕ್ತಿ ನಿಮ್ಮಲ್ಲಿದೆ. ಕಾಂಗ್ರೆಸ್ ಸಂಸ್ಕೃತಿಯಲ್ಲಿ ಬಿ ಫಾರ್ಮ್ ತಂದ್ರೆ ಗೆಲ್ಲಬಹುದು ಅನ್ನೋ ಮನಸ್ಥಿತಿ ಹೆಚ್ಚಾಗಿದೆ. ಆದ್ರೆ ಇದು ನಡೆಯಲ್ಲ, ನಾಯಕರನ್ನ ಮೆಚ್ಚಿಸೊ ಕೆಲಸ ಮಾಡ್ದೆ ಜನರನ್ನ ಮೆಚ್ಚಿಸಿ ನಿಮ್ಮದೆ ಸ್ವಾವಲಂಬನೆಯಿಂದ ಮತ ಕೇಳುವ ಶಕ್ತಿ ಬೆಳೆಸಿಕೊಳ್ಳಿ. ಬರಿ ನಾಯಕರಿಂದ ಮತ ಕೇಳುವ ಪದ್ದತಿ ಬಿಟ್ಟು ಸಾರ್ವಜನಿಕರ ಮನೆ ಸುತ್ತಿ ನಂಬಿಕೆ ಗಳಿಸಿ ಎಂದು ಕಾಂಗ್ರೆಸ್ ಮುಖಂಡರಿಗೆ ಕೃಷ್ಣಾ ಬೈರೆಗೌಡ ಎಚ್ಚರಿಕೆ ನೀಡಿದರು.
ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಎಂ.ಎಲ್.ಸಿ ನಾರಾಯಣಸ್ವಾಮಿ, ಸಲೀಂ ಅಹ್ಮದ್, ಮುಖಂಡರಾದ ಗೋಪಾಲಕೃಷ್ಣ, ಅಳ್ಳಾಳಸಂದ್ರ ಸಂತೋಷ್ ಸೇರಿ ಹಲವರು ಭಾಗವಹಿಸಿದರು.