ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ಇಂದು ಬೆಳ್ಳಂ ಬೆಳಿಗ್ಗೆ ಇಡಿ ಶಾಕ್. ಮುಂಜಾನೆ 6 ಗಂಟೆ ಸುಮಾರಿಗೆ ಜಮೀರ್ ಅಹ್ಮದ್ ಅವರ ಬೆಂಗಳೂರಿನ ನಿವಾಸ, ಅವರ ಮಾಲೀಕತ್ವದ್ದೆಂದು ಹೇಳಲಾದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ, ವಿವಿಧ ಫ್ಲಾಟ್ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ಲಗ್ಗೆ ಹಾಕಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ದಂಡು ರೈಲು ನಿಲ್ದಾಣ ಬಳಿಯ ನಿವಾಸ, ಯುಬಿ ಸಿಟಿ ಬಳಿಯ ಫ್ಲಾಟ್, ಜಮೀರ್ ಅಹ್ಮದ್ ಮಾಲೀಕತ್ವದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ.