ದೆಹಲಿ: ಜುಲೈ ಮುಗಿದರೂ ದೇಶದಲ್ಲಿ ಲಸಿಕೆ ಗೋಳು ಮುಗಿದಿಲ್ಲ. ಈ ಸಂಬಂಧ ಟ್ವೀಟಾಸ್ತ್ರ ಪ್ರಯೋಗಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ದ ಟೀಕೆ ಮಾಡಿದ್ದಾರೆ.
ಈ ಸಂಬಂಧ ಟ್ವೀಟರ್ ಮೂಲಕ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್, ‘ಜುಲೈ ಮುಗಿದು ಹೋಗಿದೆ, ಇನ್ನೂ ಲಸಿಕೆ ಕೊರತೆ ನೀಗಿಲ್ಲ’ ಎಂದು ಲಸಿಕೆಯ ಕೊರತೆಯ ವಿಸ್ತೃತ ವರದಿಯ ವೀಡಿಯೊ ತುಣುಕೊಂದನ್ನು ಪೋಸ್ಟ್ ಮಾಡಿದ್ದಾರೆ.
जुलाई चला गया है, वैक्सीन की कमी नहीं गयी।#WhereAreVaccines https://t.co/0hGVAv78x4 pic.twitter.com/QKyHBMR6X4
— Rahul Gandhi (@RahulGandhi) August 1, 2021