ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯ ತಕರಾರು ಎತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಗಮನಸೆಳೆಯಲು ಬಿಜೆಪಿ ನಾಯಕ ಅಣ್ಣಾಮಲೈ ಅವರು ಉಪವಾಸ ಕೈಗೊಂಡು ದೇಶದ ಗಮನಸೆಳೆದಿದ್ದಾರೆ.
ಈ ಬೆಳವಣಿಗೆ ಕುರಿತಂತೆ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
Mekedaatu dam project is our right, we will do it says CM @BSBommai @NewIndianXpress @santwana99 pic.twitter.com/uHPL5gYIUP
— Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@AshwiniMS_TNIE) July 31, 2021
‘ಮೇಕೆದಾಟು ನಮ್ಮ ಹಕ್ಕು. ಆ ನೀರಿನಲ್ಲಿ ನಮಗೂ ಪಾಲು ಇದೆ. ಅದರ ಯೋಜನಾ ವರದಿಯೂ ಸಿದ್ದವಾಗಿದ್ದು ಯಾರೇ ಉಪವಾಸ ಮಾಡಲಿ, ಯಾರೇ ಊಟ ಮಾಡಲಿ ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಕರ್ನಾಟಕದ ನಿಲುವನ್ನು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.