ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಜಯಭೇರಿ ಭಾರಿಸುತ್ತಿದ್ದಂತೆ ರಾಜಕೀಯದಲ್ಲೂ ಹೊಸ ರೀತಿಯಲ್ಲಿ ‘ಸೂರ್ಯೋದಯ’ ಆಗಿದೆ. ಅರ್ಥಾತ್ ‘ಸೂರ್ಯೋದಯ’ ಪಕ್ಷ ಖ್ಯಾತಿಯ ಡಿಎಂಕೆ ಯುಗ ಆರಂಭವಾಗಿದೆ.
ಈ ಹೊಸ ರಾಜಕೀಯ ಯುಗಕ್ಕೆ ಮಾಜಿ ಸಿಎಂ ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ಮುನ್ನುಡಿ ಬರೆದಿದ್ದಾರೆ. ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ (ಎಂ.ಕೆ.ಸ್ಟಾಲಿನ್) ಇಂದು ಅಧಿಕಾರ ವಹಿಸಿಕೊಂಡರು.
ಚೆನ್ನೈನ ರಾಜಭವನದಲ್ಲಿ ಎಂ.ಕೆ.ಸ್ಟಾಲಿನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಸ್ಟಾಲಿನ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.