(ದೆಹಲಿ ವಿಶೇಷ ಪ್ರತಿನಿಧಿ ವರದಿ)
ದೆಹಲಿ: ಅಕ್ರಮಗಳ ಆರೋಪಗಳ ವಿಚಾರದಲ್ಲಿ ಮತ್ತೆ ಮತ್ತೆ ಕಾನೂನು ಪ್ರಹಾರಕ್ಕೊಳಗಾಗುತ್ತಿರುವ ಸಿಎಂ ಯಡಿಯೂರಪ್ಪ, ಮತ್ತೊಂದೆಡೆ ನಾಯಕತ್ವ ಬದಲಾವಣೆ ಕುರಿತಂತೆ ಹರಿದಾಡುತ್ತಿರುವ ಸುದ್ದಿಗಳ ಸರಮಾಲೆಯಿಂದಾಗಿಯೂ ವಿಚಲಿತರಾಗಿದ್ದಾರೆ. ಇದೇ ಹೊತ್ತಿಗೆ ಹೈಕಮಾಂಡ್ ನೀಡಿರುವ ಬುಲಾವ್ ಬಿಎಸ್‌ವೈ ಅವರ ಆತಂಕವನ್ನೂ ದುಪ್ಪಟ್ಟುಗೊಳಿಸಿತ್ತು.
ಈ ನಡುವೆ ದೆಹಲಿಯಲ್ಲಿ ಭಾನುವಾರ ಬಿಜೆಪಿ ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿದ ಯಡಿಯೂರಪ್ಪರ ಮುಖದಲ್ಲಿ ಮಂದಹಾಸ ಕಾಣುತ್ತಿತ್ತು. ‘ತಮಗೆ ಹೈಕಮಾಂಡ್ ಭೇಟಿ ಖುಷಿ ತಂದಿದೆ’ ಎಂಬ ಅವರ ಮಾತಿನ ದಾಟಿಯೂ ಅಚ್ಚರಿಯ ಸನ್ನಿವೇಶಗಳನ್ನು ವಿವರಿಸುವಂತಿತ್ತು.
ರಾಷ್ಟ್ರೀಯ ಧುರೀಣರ ಭೇಟಿ, ಮಾತುಕತೆ ನಂತರ ದೆಹಲಿಯಲ್ಲಿ ಮಾಹಿತಿ ಹಂಚಿಕೊಂಡ ಸಿಎಂ ಯಡಿಯೂರಪ್ಪ, ವರಿಷ್ಠರ ಭೇಟಿ ತೃಪ್ತಿ ನೀಡಿದೆ. ಅಲ್ಲದೆ ಆದಷ್ಟು ಬೇಗ ಶುಭ ಸುದ್ದಿ ಸಿಗಲಿದೆ ಎಂದರು.
ಬಿಜೆಪಿ ವರಿಷ್ಠರ ಜೊತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು ಪೂರಕವಾದ ಸ್ಪಂದನೆ ಸಿಕ್ಕಿದೆ. ಆದಷ್ಟು ಬೇಗ ಕೇಂದ್ರದ ನಾಯಕರಿಂದ ಶುಭ ಸುದ್ದಿ ಸಿಗಲಿದೆ ಎಂದ ಅವರ ಹೇಳಿಕೆ ಬೆಂಬಲಿಗರ ಪಾಳಯದಲ್ಲೂ ಸಂತಸ ಉಕ್ಕುವಂತಿದೆ.
ಮುಂಬರುವ ಲೋಕಸಭಾ ಮತ್ತು ವಿಧಾನ ಸಭಾ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನೂ ಪಕ್ಷ ಗೆಲ್ಲುವ ಕುರಿತು ಚರ್ಚೆ ನಡೆದಿದೆ. ಅಕಾಂಕ್ಷಿಗಳ ಪಟ್ಟಿಯನ್ನು ಕಳುಹಿಸಿಕೊಡಲು ವರಿಷ್ಠರು ಸೂಚಿಸಿದ್ದಾರೆ ಎಂದು ಬಿಎಸ್‌ವೈ ತಿಳಿಸಿದರು.
https://mobile.twitter.com/BSYBJP/status/1348230906486538245