ಬೆಂಗಳೂರು: ಪಂಚಾಯತ್ ಸಮರದಲ್ಲಿ ಹಿನ್ನಡೆಯಾಗುತ್ತಿದ್ದಂತೆಯೇ ಜೆಡಿಎಸ್ ನಾಯಕರು ಮತ್ತೆ ಅಖಾಡಕ್ಕೆ ಹೂಮುಕಿದ್ದಾರೆ. ಈ ಬಾರಿ ಯುವ ಜನರನ್ನು ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆಯನ್ನು ಜೆಡಿಎಸ್ ಅನುಸರಿಸುತ್ತಿದ್ದು ನಟ ನಿಖಿಲ್ ಕುಮಾರ್ ಅವರೇ ಇದರ ಮುಂದಾಳತ್ವ ವಹಿಸಿಹೊಂದಿದ್ದಾರೆ.
ರಾಜ್ಯದಲ್ಲಿ ಜನತಾದ ದಳ( ಜಾತ್ಯತೀತ) ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸೋಮವಾರ ಯುವ ಜನತಾ ದಳ (ಜಾತ್ಯತೀತ) ಮತ್ತು ವಿದ್ಯಾರ್ಥಿ ಜನತಾ ದಳ (ಜಾತ್ಯತೀತ) ವಿಭಾಗದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಕಾರ್ಯಕಾರಿ ಸಮಿತಿಗಳ ಸದಸ್ಯರ ಸಭೆಯನ್ನು ಬೆಂಗಳೂರಿನಲ್ಲಿ ಕರೆಯುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ.
ರಾಜ್ಯದಲ್ಲಿ ಜನತಾದ ದಳ( ಜಾತ್ಯತೀತ) ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯುವ ಜನತಾ ದಳ( ಜಾತ್ಯತೀತ) ಮತ್ತು ವಿದ್ಯಾರ್ಥಿ ಜನತಾ ದಳ( ಜಾತ್ಯತೀತ) ವಿಭಾಗದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಕಾರ್ಯಕಾರಿ ಸಮಿತಿಗಳ ಸದಸ್ಯರ ಸಭೆಯನ್ನು ದಿನಾಂಕ 04-01-2021 ರ ಸೋಮವಾರ ಪಕ್ಷದ ಕೇಂದ್ರಕಚೇರಿ ಜೆಪಿ ಭವನದಲ್ಲಿ ಆಯೋಜಿಸಲಾಗಿದೆ. pic.twitter.com/1RWBKhRFbI
— Nikhil Kumar (@Nikhil_Kumar_k) December 30, 2020