ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಥೆ ಮುಗಿಯದ ಅಧ್ಯಾಯವೇ? ಪರಿಸ್ಥಿಯನ್ನು ಅವಲೋಕಿಸಿದರೆ ನಿತ್ಯವೂ ಕೊರೋನಾ ಕರಾಳತೆಯ ದಿನಗಳೇ. ರಾಜ್ಯದಲ್ಲಿ ಭಾನುವಾರ ಕೂಡಾ 5 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದ ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಭಾನುವಾರ ಸಂಜೆಯವರೆಗೆ ಕಳೆದ 24 ತಾಸುಗಳಲ್ಲಿ ಹೊಸದಾಗಿ 5,938 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ವಧಿಯಲ್ಲಿ 68 ಮಂದಿ ಬಲಿಯಾಗಿದ್ದಾರೆ.
ಈ ಕುರಿತಂತೆ ಅಂಕಿ ಅಂಶ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,77,814ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಭಾನುವಾರ 2,126 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರೆ, ಬಳ್ಳಾರಿಯಲ್ಲಿ 406, ಹೊಸ ಕೇಸ್’ಗಳು ವರದಿಯಾಗಿವೆ. ಬೆಳಗಾವಿಯಲ್ಲಿ 136, ದಾವಣಗೆರೆಯಲ್ಲಿ 265, ಕೊಪ್ಪಳ 256, ಶಿವಮೊಗ್ಗ 246, ಕಲಬುರಗಿಯಲ್ಲಿ 203, ವಿಜಯಪುರದಲ್ಲಿ 134, ಹಾಸನದಲ್ಲಿ 196, ಧಾರವಾಡದಲ್ಲಿ 194, ಉಡುಪಿಯಲ್ಲಿ 117, ದಕ್ಷಿಣ ಕನ್ನಡದಲ್ಲಿ 193, ಗದಗ 182, ಹಾವೇರಿಯಲ್ಲಿ 150, ಬಾಗಲಕೋಟೆಯಲ್ಲಿ 139, ತುಮಕೂರಲ್ಲಿ 112, ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.