ಉಕ್ರೇನ್ ಮೇಲಿನ ರಷ್ಯಾ ಸಾರಿರುವ ಸಮರ ಭಾರೀ ಸಾವು-ನೋವಿಗೆ ಕಾರಣವಾಗಿದೆ. ಉಕ್ರೇನ್ ರಾಷ್ಟ್ರವಂತೂ ನಲುಗಿ ಹೋಗಿದೆ. ಇದೇ ಸಂದರ್ಭದಲ್ಲಿ ಪರಿಸ್ಥಿತಿ ಎದುರಿಸಲು ಉಕ್ರೇನ್ ಆಡಳಿತ ಹರಸಾಹಸಪಡುತ್ತಿದೆ.
ಈ ಪರಿಸ್ಥಿತಿ ನಡುವೆ ಸಮರ ಸಂತ್ರಸ್ತ ನಾಡು ಅನೇಕಾನೇಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ದಾಳಿಕೋರ ರಷ್ಯಾವನ್ನು ಸದೆಬಡಿಯಲು ಸನ್ನದ್ಧವಾಗಿದ್ದ ಸೇನೆಗೆ ಮಕ್ಕಳಿಬ್ಬರು ಗೌರವ ಸಲ್ಲಿಸಿದ ಪ್ರಸಂಗ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಈ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
This photo brought tears to my eyes. Two young Ukrainian children sending off soldiers to fight the Russians. The kids holding hands, the girl holds a stuffed animal, the boy (her brother?) salutes. Look what he has on his back. This picture speaks a thousand words.#ukraine pic.twitter.com/VqC6wccrGh
— Glenn R. Stutzky (@stutzky) February 26, 2022