ಹಾವೇರಿ: ಪ್ರಾಯಾಣಿಕರಿದ್ದ ಕಾರು ಸೇತುವೆಯಿಂದ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟಬೆ ಹಾವೇರಿ ಸಮೀಪ ಸಂಭವಿಸಿದೆ.
ತಿರುಪತಿ ದರ್ಶನಕ್ಕೆಂದು ಹೋಗುತ್ತಿದ್ದವರ ಕಾರು ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು 45 ವರ್ಷ ಹರೆಯದ ಸುರೇಶ ವೀರಪ್ಪ ಜಾಡಿ, 28 ವರ್ಷದ ಪವಿತ್ರಾ ಪ್ರಭುರಾಜ ಸಮಗಂಡಿ, 22 ವರ್ಷದ ಐಶ್ವರ್ಯ ಈರಪ್ಪ ಬಾರ್ಕಿ, 7 ವರ್ಷದ ಚೇತನಾ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ತನಿಖೆ ಕೈಗೊಂಡಿದ್ದಾರೆ.







































































