ಬೆಂಗಳೂರು: ದಿಢೀರ್ ನಿರ್ಧಾರವೊಂದರಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ಶನಿವಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು 25.92 ಶೇಕಡಾದಿಂದ ಶೇ 29.84 ಕ್ಕೆ ಹೆಚ್ಚಿಸಲಾಗಿದ್ದು. ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು 14.34 ಶೇಕಡಾದಿಂದ 18.44 ಶೇಕಡಾವರೆಗೆ ಹೆಚ್ಚಿಸಲಾಗಿದೆ.
ತೆರಿಗೆ ದರ ಹೆಚ್ಚಳದ ಪರಿಣಾಮವಾಗಿ ಸದ್ಯದ ದರದಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 3 ರೂಪಾಯಿ ಹಾಗೂ ಡಿಸೇಲ್ ಧಾರಣೆ ಲೀಟರಿಗೆ 3.50 ರೂಪಾಯಿ ಹೆಚ್ಚಳವಾಗಲಿದೆ. ಈ ದರ ಪರಿಷ್ಕರಣೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.

























































