ಲಾಸ್ ಏಂಜಲೀಸ್: ‘ಬಾಹುಬಲಿ’ ನಿರ್ಮಾತೃ ರಾಜಮೌಳಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್.ರಾಜಮೌಳಿ ಅವರ RRR ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಹಾಡು ವಿಭಾಗದಲ್ಲಿ ‘ನಾಟು ನಾಟು..’ ಆಸ್ಕರ್ ಅವಾರ್ಡ್ ಗೆದ್ದಿದೆ.
❤️🔥❤️🔥❤️🔥❤️🔥❤️🔥❤️🔥❤️🔥 #NaatuNaatu #RRRMovie #Oscars95 pic.twitter.com/yIDgYJlTXH
— RRR Movie (@RRRMovie) March 13, 2023
ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಘೋಷಣೆಯಾಗಿದೆ. ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಸೇರಿದಂತೆ RRR ಚಿತ್ರತಂಡದ ಪ್ರಮುಖರು ಈ ಸಮಾರಕ್ಕೆ ಸಾಕ್ಷಿಯಾದರು.
‘ನಾಟು ನಾಟು..’, ‘ಲಿಫ್ಟ್ ಮಿ ಅಪ್’, ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಮೊದಲಾದ ಹಾಡುಗಳು ರೇಸ್ನಲ್ಲಿದ್ದವು.
ಈ ಪ್ರಶಸ್ತಿ ಸಿಕ್ಕಿರುವ ಬೆಳವಣಿಗೆ ತೆಲುಗು ಸಿನಿಮಾ ರಂಗದಲ್ಲಿ ಹಬ್ಬ ಸಂಭ್ರಮಕ್ಕೆ ಕಾರಣವಾಗಿದೆ.