ದೇಶದ ಹಣಕಾಸು ವ್ಯವಸ್ಥೆಗೆ ಪುಷ್ಠಿ ನೀಡಲು ಭಾರತೀಯ ರಿಸವರ್್ ಬ್ಯಾಂಕ್ ತೀಮರ್ಾನಿಸಿದ್ದು;ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯನ್ನು ಕರೆಯಲಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿವಿಧ ಕ್ರಮಗಳನ್ನು ಘೋಷಿಸಿದ್ದಾರೆ..ಸಾರ್ವಜನಿಕರ ಹಿತದೃಷ್ಠಿಯಿಂದ ಲಾಕ್ಡೌನ್ ಘೋಷಣೆಯಾದ ಬಳಿಕ ಸಾಲದ ಕಂತುಗಳನ್ನು ಕಟ್ಟುವುದು ಮೂರು ತಿಂಗಳು ಮುಂದೂಡಿದ್ದ ಆರ್ಬಿಐ ಇದೀಗ ಇನ್ನೂ 3 ತಿಂಗಳು ಮುಂದಕ್ಕೆ ಹಾಕಿದೆ. ಮೂರು ತಿಂಗಳಾದ ಬಳಿಕ ಒಟ್ಟಾರೆ ಆರು ತಿಂಗಳು ಬಾಕಿ ಉಳಿದ ಕಂತುಗಳ ಮೇಲಿನ ಬಡ್ಡಿ ಸೇರಿಸಿ ಸಾಲ ಪಾವತಿ ಮಾಡಬೇಕಾಗುತ್ತದೆ ಎಂದಿದ್ದಾರೆ.
ಇನ್ನು ರೆಪೋ ಮತ್ತು ರಿವಸರ್್ ರೆಪೋ ದರ ಇಳಿಕೆ ಮಾಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ.ಅಂದ್ರೆ ಸುಮಾರು 4.4 ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆಯಾಗಿದೆ. ರಿವಸರ್್ ರೆಪೋ ದರವನ್ನೂ ಕೂಡ ಶೇ. 3.35ಕ್ಕೆ ಇಳಿಸಲಾಗಿದೆ.ಇದರ ಜೊತೆ ಮಾತನಾಡಿದ ಗವರ್ನರ್ ಕಿಲ್ಲರ್ ವೈರಸ್ ಕೊರೋನಾ ಇಡೀ ದೇಶದ ಆಥರ್ಿಕತೆಯನ್ನು ಬುಡಮೇಲು ಮಾಡಿದೆ.ನಿರೀಕ್ಷೆ ಮೀರಿ ಆಥರ್ಿಕ ಸ್ಥಿತಿ ಕುಸಿದಿದೆ. ಕಚ್ಚಾತೈಲದ ಬೆಲೆ ಕಡಿಮೆಯಾದ ಪರಿಣಾಮ ಆದಾಯದಲ್ಲಿ ಏರಿಳಿತವಾಗಿದೆ .
ಅಂದಹಾಗೆ ಆಹಾರ ಹಣದುಬ್ಬರ ಪ್ರಮಾಣವು ಏ.ಶೇ8.6ಕ್ಕೆ ಹೆಚ್ಚಿದೆ.ಜೊತೆಗೆ ಲಾಕ್ಡೌನ್ ಬಳಿಕ ಖಾಸಗಿ ಜೀವನದ ಪ್ರಮಾಣ ಕಡಿಮೆಯಾಗಿದೆ.ಔದ್ಯಮಿಕ ಉತ್ಪಾದನೆಗೂ ಹೊಡೆತಬಿದ್ದಿದೆ. ಆಮದಿನಲ್ಲಿ ಶೇ. 58ರಷ್ಟು ಕಡಿಮೆಯಾಗಿದೆ.ಹಣದುಬ್ಬರ ಪ್ರಮಾಣ ಏಪ್ರಿನಲ್ಲಿ ಶೇ.8.6 ಕ್ಕೆ ಹೆಚ್ಚಿದೆ ಎಂದಿದ್ದಾರೆ.