ಬೆಂಗಳೂರು: ನಗರದಲ್ಲಿ ಆಟೋ ಪ್ರಯಾಣ ದರದ ಬಿಸಿ ಮತ್ತೆ ಜನರನ್ನು ತಟ್ಟಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಹೊರಡಿಸಿದ ಹೊಸ ಆದೇಶದಂತೆ, ನಗರದಲ್ಲಿ ಆಟೋ ಮೀಟರ್ ದರವನ್ನು ಹೆಚ್ಚಿಸಲಾಗಿದೆ.
ಈಗಾಗಲೇ ಇದ್ದ ಕನಿಷ್ಠ ಎರಡು ಕಿಲೋಮೀಟರ್‌ಗಳ ಪ್ರಯಾಣ ದರ ₹30 ರಿಂದ ₹36ಕ್ಕೆ ಏರಿಕೆ ಮಾಡಲಾಗಿದೆ. ಇದೇ ರೀತಿ, ಕನಿಷ್ಠ ದೂರ ಮೀರಿದ ಬಳಿಕ ಪ್ರತಿ ಕಿಮೀಗೆ ವಿಧಿಸುತ್ತಿದ್ದ ₹15 ದರವನ್ನು ₹18ಕ್ಕೆ ಹೆಚ್ಚಿಸಲಾಗಿದೆ. ಈ ದರ ಆಗಸ್ಟ್ 1 ರಿಂದ ನಗರದಲ್ಲಿ ಜಾರಿಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.