ಬೆಂಗಳೂರು: ಪಕ್ಷ ಹಾಗೂ ಸರ್ಕಾರದ ನಡುವೆ ಉತ್ತಮ ಬಾಂಧವ್ಯ ಹೊಂದುವಂತಹ ಸಂಪ್ರದಾಯ ಬಿಜೆಪಿ ಬಿಟ್ಟರೆ ಇತರೆ ಪಕ್ಷದಲ್ಲಿ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಬಿಜೆಪಿಯಲ್ಲಿ ಸರ್ಕಾರ ಮತ್ತು ಪಕ್ಷದ ನಡುವೆ ಸಮರ್ಪಕ ಸಂಪರ್ಕ ಸ್ವಾಮ್ಯತೆ ಕಲ್ಪಿಸಲು ಪ್ರತಿ ತಿಂಗಳಲ್ಲಿ ಎರಡು ಬಾರಿ ಸಚಿವರು ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರ ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆ ಆಲಿಸಬೇಕೆಂಬ ಸೂಚಿಸಿರುವುದಾಗಿ ಪಕ್ಷ ದ ವರಿಷ್ಠರು ಸೂಚಿಸಿರುವುದಾಗಿ ಹೇಳಿದರು.
ಕೋವಿಡ್ ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕು.ಜನರ ಭಾವನೆಗೆ ಧಕ್ಕೆ ಬಾರದಂತೆ ನಿರ್ಧಾರ ತೆಗೆದುಕೊಳ್ಳಬೇಕು ಹೀಗಾಗಿ ಗಣೇಶ ಹಬ್ಬಾಚರಣೆ ಸಂಬಂಧ ಸಿಎಂ ತಜ್ಞರ ಸಭೆ ಕರೆದಿದ್ದಾರೆ.ತಜ್ಞರ ಅಭಿಪ್ರಾಯ ಪಡೆದು ಸಿಎಂ ತೀರ್ಮಾನ ಮಾಡಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿಸಿಪಿ ಉತ್ತರಿಸಿದರು.