ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗಾಗಿ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ತಂಡವು ವಿಭಾಗ ಮಟ್ಟದಲ್ಲಿ ಪ್ರವಾಸ ಮಾಡಲಿದೆ. ಏಪ್ರಿಲ್ 12ರಿಂದ 24ರವರೆಗೆ 3 ತಂಡಗಳಲ್ಲಿ ಪ್ರವಾಸ ನಡೆಯಲಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ತಿಳಿಸಿದ್ದಾರೆ.
ಈ ತಂಡಗಳು ವಿಭಾಗ ಕೇಂದ್ರದಲ್ಲಿ 2 ದಿನಗಳ ಕಾರ್ಯಕ್ರಮ ಸಂಘಟಿಸಲಿವೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕೋರ್ ಕಮಿಟಿ ಸಭೆ ನಡೆಯಲಿದೆ. ನಂತರ ಆ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜಿಲ್ಲೆಯ ಪ್ರಮುಖರೊಂದಿಗೆ ವೈಯಕ್ತಿಕ ಮಾತುಕತೆ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ತಂಡಗಳು ವಿಭಾಗ ಕೇಂದ್ರದ ಮಂಡಲಗಳ ಬೂತ್ ಅಧ್ಯಕ್ಷರ ಮತ್ತು ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶವನ್ನು ನಡೆಸುವಂತೆ ನಿರ್ಮಲ್ ಕುಮಾರ್ ಸುರಾಣ ತಿಳಿಸಿದ್ದಾರೆ.