ಬೆಂಗಳೂರು: ದಕ್ಷಿಣ ಬೆಂಗಳೂರಿನ ಆರ್.ವಿ. ರಸ್ತೆಯಿಂದ ಪಶ್ಚಿಮದ ಬೊಮ್ಮಸಂದ್ರವರೆಗಿನ ಬಹುನಿರೀಕ್ಷಿತ ‘ಹಳದಿ ಮಾರ್ಗ’ ಮೆಟ್ರೋ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.
VIDEO | PM Narendra Modi (@narendramodi) inaugurates Yellow Line of Namma Metro in Bengaluru. The traffic congestions are expected to be eased with the new Metro Line. More than 6 lakhs passengers are going to be benefitted.
(Source: Third Party)#NammaMetro #BengaluruMetro… pic.twitter.com/ovF358Kcwe
— Press Trust of India (@PTI_News) August 10, 2025
ಒಟ್ಟು 19.15 ಕಿ.ಮೀ ಉದ್ದ, 16 ನಿಲ್ದಾಣಗಳನ್ನು ಒಳಗೊಂಡಿರುವ ಈ ಮಾರ್ಗವನ್ನು ₹7,160 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ದಿನ ಸుమಾರು 8 ಲಕ್ಷ ಪ್ರಯಾಣಿಕರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ನಿಲ್ದಾಣಗಳ ಪಟ್ಟಿ:
-
ಆರ್.ವಿ ರಸ್ತೆ (ಹಸಿರು ಮಾರ್ಗ ಸಂಪರ್ಕ),
-
ರಾಗಿಗುಡ್ಡ,
-
ಜಯದೇವ ಆಸ್ಪತ್ರೆ (ಭವಿಷ್ಯದಲ್ಲಿ ನೇರಳೆ ಮಾರ್ಗ ಸಂಪರ್ಕ),
-
ಬಿಟಿಎಂ ಲೇಔಟ್,
-
ಕೇಂದ್ರ ರೇಷ್ಮೆ ಮಂಡಳಿ,
-
ಎಚ್‌ಎಸ್‌ಆರ್ ಲೇಔಟ್,
-
ಆಕ್ಸ್‌ಫರ್ಡ್ ಕಾಲೇಜು,
-
ಹೊಂಗಸಂದ್ರ,
-
ಕೂಡ್ಲು ಗೇಟ್,
-
ಸಿಂಗಸಂದ್ರ,
-
ಹೊಸ ರೋಡ್,
-
ಎಲೆಕ್ಟ್ರಾನಿಕ್ ಸಿಟಿ–1,
-
ಕೋನಪ್ಪನ ಅಗ್ರಹಾರ,
-
ಹುಸ್ಕೂರು ರಸ್ತೆ,
-
ಹೆಬ್ಬಗೋಡಿ,
-
ಬೊಮ್ಮಸಂದ್ರ.
ಸಂಚಾರ ದಟ್ಟಣೆ ಕಡಿತದ ನಿರೀಕ್ಷೆ: ಹೊಸ ಮಾರ್ಗವು ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಸೇರಿದಂತೆ ಇನ್ಫೋಸಿಸ್, ಬಯೋಕಾನ್, ಟಿಸಿಎಸ್ ಮುಂತಾದ ಐಟಿ ಕಂಪನಿಗಳ ವಲಯಗಳನ್ನು ನಗರದ ಇತರ ಭಾಗಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಇದರಿಂದ ವಿಶೇಷವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಂತಹ ಸಂಚಾರದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಒತ್ತಡ ತಗ್ಗುವ ನಿರೀಕ್ಷೆ ಇದೆ.
ಆಗಸ್ಟ್ 11ರಿಂದ ವಾಣಿಜ್ಯ ಸಂಚಾರ: ಆರಂಭಿಕ ಹಂತದಲ್ಲಿ ಮೂರು ಚಾಲಕರಹಿತ ರೈಲುಗಳು ಬೆಳಿಗ್ಗೆ 5ರಿಂದ ರಾತ್ರಿ 11ರವರೆಗೆ ಪ್ರತಿ 25 ನಿಮಿಷಕ್ಕೊಮ್ಮೆ ಸಂಚರಿಸಲಿವೆ. ಈ ತಿಂಗಳ ಕೊನೆಯ ವೇಳೆಗೆ ಹೆಚ್ಚಿನ ರೈಲುಗಳನ್ನು ಸೇರಿಸಿ, ಸೇವಾ ಅವಧಿಯನ್ನು 20 ನಿಮಿಷಕ್ಕೊಮ್ಮೆ ನಡೆಸುವ ಯೋಜನೆ ಇದೆ.
ದರಗಳು: ಮೆಟ್ರೋ ಪ್ರಯಾಣ ದರ ₹10ರಿಂದ ₹90ರವರೆಗೆ ಇರುತ್ತದೆ. ಉದಾಹರಣೆಗೆ, ಆರ್.ವಿ. ರಸ್ತೆಯಿಂದ ಜಯದೇವ ಆಸ್ಪತ್ರೆಗೆ ಪ್ರಯಾಣಕ್ಕೆ ₹10, ವೈಟ್‌ಫೀಲ್ಡ್ (ನೇರಳೆ ಮಾರ್ಗ) ನಿಂದ ಬೊಮ್ಮಸಂದ್ರ (ಹಳದಿ ಮಾರ್ಗ) ವರೆಗೆ ₹90 ಆಗಲಿದೆ.