ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ದೇವರ ಕಾರ್ಯಕ್ರಮ ವೇಳೆ ಪುಂಡರು ವಿಕೃತಿ ಮೆರೆದಿದ್ದಾರೆ. ಇಸ್ಕಾನ್ ರಥಯಾತ್ರೆಗೆ ಅಡ್ಡಿಪಡಿಸಲು ಉತ್ಸವ ಮೆರವಣಿಗೆ ಮೇಲೆ ಮೊಟ್ಟೆಗಳನ್ನು ತೋರಿ ಕಿಡಿಗೇಡಿಗಳು ಪುಂಡಾಟ ಪ್ರದರ್ಶಿಸಿದ್ದು, ಈ ಘಟನೆಯನ್ನು ಭಾರತ ಖಂಡಿಸಿದೆ.
ರಥಯಾತ್ರೆ ಸಾಗುತ್ತಿದ್ದಂತೆಯೇ ಪುಂಡರು ಭಕ್ತರ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ. ಈ ಘಟನೆಯಿಂದ ಉತ್ಸವದಲ್ಲಿ ಭಾಗಿಯಾಗಿದ್ದ ಭಕ್ತರು ವಿಚಲಿತರಾಗಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಲ್ಲಿ ವೈರಲ್ ಆಗಿವೆ.
ಈ ಘಟನೆಯನ್ನು ಖಂಡಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಸಾಮಾಜಿಕ ಸಾಮರಸ್ಯಕ್ಕೆ ವಿರುದ್ಧವಾಗಿ ನಡೆದಿರುವ ಈ ಘಟನೆಯು ದುರದೃಷ್ಟಕರ ಎಂದಿದ್ದಾರೆ.