ಬೆಂಗಳೂರು: ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಭಾವನೆ ಉಂಟಾಗದಂತೆ ಸರ್ಕಾರ ಕಠಿಣ ನಡೆ ಅನುಸರಿಸಲು ಮುಂದಾಗಿದೆ. ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಷೇಧಿಸಿದೆ. ನಿಯಮ ಉಲ್ಲಂಘನೆಯಾದರೆ 5 ಸಾವಿರ ರೂ ದಂಡ ವಿಧಿಸುವುದಾಗಿ ಮಂಡಳಿ ಹೇಳಿದೆ.
ವಾಹನ ತೊಳೆಯಲು, ಕೈದೋಟ, ನಿರ್ಮಾಣ ಕಾಮಗಾರಿ, ನೀರಿನ ಕಾರಂಜಿ ಮತ್ತು ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಕುಡಿಯುವ ನೀರು ಬಳಕೆಯನ್ನು ನಿಷೇಧಿಸಳಾಗಿದ್ದು, ಆದೇಶ ಉಲ್ಲಂಘಿಸಿದರೆ 5,000 ರೂ ದಂಡ ವಿಧಿಸಲಾಗುವುದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೇಳಿದೆ.






















































