ದೆಹಲಿ: ಹಿರಿಯ ರಾಜಕಾರಣಿ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಪ್ರಸಕ್ತ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಸ್ಪರ್ಧಿಯಾಗಿ ಅವರು ಕಣಕ್ಕಿಳಿದಿದ್ದಾರೆ. ಉತ್ತರ ಪ್ರದೇಶದಿಂದ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಜಿ-23 ನಾಯಕರು ಎಂದೇ ಗುರುತಾಗಿರುವ ಕಾಂಗ್ರೆಸ್‌ನ ರಾಹುಲ್ ವಿರೋಧಿಗಳ ಜೊತೆ ಕಪಿಲ್ ಸಿಬಲ್ ಗುರುತಿಸಿಕೊಂಡಿದ್ದರು. ಗಾಂಧಿ ಕುಟುಂಬದ ನಾಯಕತ್ವದ ವಿರುದ್ದ ಹಾಗೂ ರಾಹುಲ್ ಗಾಂಧಿಯವರ ವಿರುದ್ಧದ ಟೀಕೆಗಳಲ್ಲಿ ಧ್ವನಿಯಾಗಿದ್ದರು.
#WATCH | Kapil Sibal filed nomination for Rajya Sabha elections, with the support of SP, in presence of party chief Akhilesh Yadav & party MP Ram Gopal Yadav
He says, "I've filed nomination as Independent candidate. I have always wanted to be an independent voice in the country" pic.twitter.com/HLMVXYccHR
— ANI UP/Uttarakhand (@ANINewsUP) May 25, 2022
2016 ರಲ್ಲಿ, ಅವರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷದಿಂದ ಬೆಂಬಲಿತವಾದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರ ರಾಜ್ಯಸಭೆಯ ಅವಧಿ ಜುಲೈನಲ್ಲಿ ಕೊನೆಗೊಳ್ಳುತ್ತದೆ. ಮರುಆಯ್ಕೆ ಬಯಸಿದ್ದಾರಾದರೂ ಈ ಬಾರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಬೆಂಬಲದೊಂದಿಗೆ ಸಿಬಲ್ ಅವರು ನಾಮಪತ್ರ ಸಲ್ಲಿಸಿದರು.






































































