ಬೆಂಗಳೂರು: ಕಲ್ಲು ಎಸೆಯುವವರ ಮೇಲೆ ಅದೆಷ್ಟು ಪ್ರೀತಿ ನಿಮಗೆ!? ಎಂದು ಜಾತ್ಯಾತೀತ ಜನತಾ ದಳ ಸಚಿವ ಪ್ರಿಯಾಂಕ್ ಖರ್ಗೆಯವರ ಕಾಲೆಳೆದಿದೆ.
ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ‘ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರ ನೀಡುತ್ತದೆ’ ಎಂದಿದೆ.
ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದು ಆಕ್ರಮಣಕಾರಿಯಾಗಿ ದಾಳಿ ಮಾಡಿ ಗಲಭೆ ಸೃಷ್ಟಿಸುವ ಮೂಲಕ, ಸಮಾಜದ ಸಾಮರಸ್ಯ ಹಾಳು ಮಾಡಿ, ಮುಗ್ಧ ಮಕ್ಕಳು ಹಾಗೂ ಯುವಜನರ ಮನಸಿನ ಮೇಲೆ ದುಷ್ಪರಿಣಾಮ ಬೀರುವ ಸಮಾಜ ಘಾತುಕರ ಮೇಲಿನ ಪ್ರಕರಣಗಳನ್ನು ಹಿಂಪಡೆದಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಜೆಡಿಎಸ್ ಹೇಳಿದೆ.
ಗಲಭೆಕೋರರ ವಿರುದ್ಧದ ಕೇಸು ಹಿಂಪಡೆದಿರುವುದರ ಹಿಂದಿನ ಅಜೆಂಡಾ ಗಮನಿಸಿದರೇ, ಅಂದಿನ ಗಲಭೆಗೆ ಚಿತ್ತಾಪುರದ ಶಾಸಕರ ಚಿತಾವಣೆಯೂ ಇರುವ ಸಂಶಯ ರಾಜ್ಯದ ಜನರಲ್ಲಿ ಮೂಡುತ್ತಿದೆ ಎಂದು ಜೆಡಿಎಸ್ ಅನುಮಾನ ವ್ಯಕ್ತಪಡಿಸಿದೆ.
‘ @PriyankKharge ಅವರೇ, ಕಲ್ಲು ಎಸೆಯುವವರ ಮೇಲೆ ಅದೆಷ್ಟು ಪ್ರೀತಿ ನಿಮಗೆ!?
“ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ತ್ವಗಳನ್ನೊಳಗೊಂಡ ಸಂವಿಧಾನವು ನಮಗೆ… pic.twitter.com/hC8X6zRtHx
— Janata Dal Secular (@JanataDal_S) October 21, 2025