ಜೈಪುರ: ಚೆನ್ನೈ ಬಳಿಕ ರಾಜಸ್ಥಾನ್ ರಾಯಲ್ಸ್ (RR) ತಂಡ ಕೂಡಾ ಈ ಬಾರಿಯ ಐಪಿಎಲ್ ಸರಣಿಯಿಂದ ಎಲಿಮಿನೇಟ್ ಆಗಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲುಂಡು ಸರಣಿಯಿಂದ ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್ (MI)ತಂಡ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು 100 ರನ್ ಗಳ ಅಂತರದಿಂದ ಸೋಲಿಸಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಗೆ ಇದು ಸತತ ಆರನೇ ಗೆಲುವಾಗಿದ್ದು, ಈ ಜಯಭೇರಿಯೊಂದಿಗೆ ಅಂಕ ಪಟ್ಟಿಯಲ್ಲಿ ಆಗ್ರ ಸ್ಥಾನಕ್ಕೆ ಏರಿದೆ.
© 2020 Udaya News – Powered by RajasDigital.