ಚೆನ್ನೈ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕ ಸಂಸದರು ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಭಾನುವಾರ ಸಂಜೆ ತಾಂತ್ರಿಕ ದೋಷ ಉಂಟಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ AI 2455 ವಿಮಾನದಲ್ಲಿ ಹವಾಮಾನ ವೈಪರೀತ್ಯದ ಜೊತೆಗೆ ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಂಡ ಕಾರಣ, ಪೈಲಟ್ ತಕ್ಷಣ ತುರ್ತು ಲ್ಯಾಂಡಿಂಗ್ ನಿರ್ಧರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಕೆ.ಸಿ. ವೇಣುಗೋಪಾಲ್, “ನಾನು, ಅನೇಕ ಸಂಸದರು ಹಾಗೂ ನೂರಾರು ಪ್ರಯಾಣಿಕರನ್ನು ಒಳಗೊಂಡು ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಇಂದು ದೊಡ್ಡ ದುರಂತದಿಂದ ತೀರಾ ಸ್ವಲ್ಪದರಲ್ಲೇ ಪಾರಾಗಿದೆ” ಎಂದು ಹೇಳಿದ್ದಾರೆ.