ಬೆಂಗಳೂರು; ರಾಜ್ಯದಲ್ಲಿ ಉಪಚುನಾವಣಾ ಅಖಾಡಕ್ಕೆ ರಂಗು ಬಂದಿದ್ದು ರಾಜಕೀಯ ಕ್ಷಗಳಿಂದ ಭರ್ಜರಿ ಕಸರತ್ತು ಸಾಗಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ರಾಜ್ಯದ ಮೂರು ಉಪಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಗುರುವಾರ ತನ್ನ ಉಮೇದುವಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಸವಕಲ್ಯಾಣದಿಂದ ಮಾಜಿ ಶಾಸಕ ನಾರಾಯಣ ರಾವ್ ಪತ್ನಿ ಮಲ್ಲಮ್ಮ, ಸಿಂದಗಿ ಕ್ಷೇತ್ರದಿಂದ ಅಶೋಕ್ ಮನಗೂಳಿ, ಮಸ್ಕಿಯಿಂದ ಬಸವನಗೌಡ ತುರವಿಹಾಳ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕಟ್ ಘೋಷಣೆ ಮಾಡಿದೆ.