ನವದೆಹಲಿ: ಉತ್ತರಾಖಂಡ ಸೇರಿದಂತೆ ಉತ್ತರ ಭಾರತದಲ್ಲಿ ಮಳೆಯಾಗುತ್ತಿರುವಂತೆಯೇ ಉತ್ತರ ಕಾಶಿ ಭೀಕರ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಮೇಘ ಸ್ಪೋಟ ಹಲವರ ಸಾವಿಗೆ ಕಾರಣವಾಗಿದೆ. ಸುಮಾರು ಮೂರು ತಾಸುಗಳ ಅವಧಿಯಲ್ಲಿ ಮೂರು ಬಾರಿ ಭಾರೀ ಮಳೆಯಾಗಿದೆ. ಭಾರಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಅಸ್ತಿ ಪಾಸ್ತಿ ಹಾನಿಯಾಗಿದೆ. ಜೊತೆಗೆ ನಾಲ್ವರು ಸಾವನ್ನಪ್ಪಿದ್ದಾರೆ.
ಈ ನಡುವೆ ದಿಢೀರ್ ಪ್ರವಾಹದಿಂದಾಗಿ 9 ಯೋಧರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಪತ್ತೆಯಾಗಿರುವವರಿಗಾಗಿ ಸೇನೆ ಮತ್ತು ಇತರ ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿದೆ.
© 2020 Udaya News – Powered by RajasDigital.