ಬೆಂಗಳೂರು: ರಾಜ್ಯ ರೈತ ಮೋರ್ಚಾಕ್ಕೆ ಪದಾಧಿಕಾರಿಗಳನ್ನು ನೇಮಿಸಿ ಮೋರ್ಚಾದ ರಾಜ್ಯಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷರಾಗಿ ಕುಮಾರಿ ಸಿ.ಮಂಜುಳಾ (ಬೆಂಗಳೂರು ಉತ್ತರ) ಅವರನ್ನು ನೇಮಿಸಲಾಗಿದೆ. ರಾಜ್ಯ ಕಾರ್ಯದರ್ಶಿಯಾಗಿ ರವಿಕಾಂತ ಸಿದ್ದಪ್ಪ ಬಗಲಿ (ವಿಜಯಪುರ), ರಾಜ್ಯ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪಿ.ಆರ್.ಪ್ರಶಾಂತ್ (ಶಿವಮೊಗ್ಗ), ರಾಜ್ಯ ಮಾಧ್ಯಮ ಸಂಚಾಲಕರಾಗಿ ಶರತ್ ಹೆಗಡೆ (ಬೆಂಗಳೂರು ಉತ್ತರ), ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ರಾಮನಗೌಡ ತಿಮ್ಮನಗೌಡ ಪಾಟೀಲ (ಬಾಗಲಕೋಟೆ), ಮಹಾದೇವಿ ಪೂಜಾರ್ (ಹುಬ್ಬಳ್ಳಿ- ಧಾರವಾಡ), ಎಂ.ಮೀರಾಬಾಯಿ (ವಿಜಯನಗರ), ಹೆಚ್.ಎಸ್.ದೇವರಾಜು (ಮೈಸೂರು ಗ್ರಾಮಾಂತರ), ರುಕ್ಮಿಣಿ ಯೋಗೇಶ್ (ಹಾಸನ), ಜಯಪ್ರತಿಭಾ ಕೆ.ಎಸ್. (ಚಿತ್ರದುರ್ಗ) ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರನ್ನಾಗಿ ರುದ್ರಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ