ಬೆಂಗಳೂರು: ಪರಿಷತ್ ಪೈಟ್ ರಾಜ್ಯ ರಾಜಕಾರಣದಲ್ಲಿ ಪಕ್ಷಗಳ ಭರ್ಜರಿ ಕಾದಾಟಕ್ಕೆ ಸಾಕ್ಷಿಯಾದರೆ, ಅದೇ ಹೊತ್ತಿಗೆ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 27ರಂದು ಹೊಸಪೇಟೆ, ಹೆಬ್ಬಗೋಡಿ, ಚಿಕ್ಕಮಗಳೂರು, ಶಿರಾ, ಗದಗ-ಬೆಟಗೇರಿ ಸಹಿತ 4 ನಗರಸಭೆಗಳಿ, 19 ಪುರಸಭೆಗಳು, 35 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ವೇಳಾಪಟ್ಟಿ ಹೀಗಿದೆ:
- ಅಧಿಸೂಚನೆ – ಡಿಸೆಂಬರ್ 1
- ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಡಿ.17
- ಮತದಾನ – ಡಿಸೆಂಬರ್ 27,
- ಮತೆಣಿಕೆ – ಡಿಸೆಂಬರ್ 30