ಬಾಗಲಕೋಟೆ: ಕರ್ನಾಟಕ ಉಪಚುನಾವಣೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಬಾಗಲಕೋಟೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪರ ಅಚ್ಚರಿ ಹುಟ್ಟಿಸುವಂತ ಗೆಲುವು ದಾಖಲಾಗಿದೆ. ಉಮೇಶ್ ಮೇಟಿ ಅವರು ಭರ್ಜರಿ ಬಹುಮತದೊಂದಿಗೆ ಜಯಗಳಿಸಿದ್ದು, ರಾಜಕೀಯ ವಲಯದಲ್ಲಿ ಹೊಸ ಸಮೀಕರಣಕ್ಕೆ ವೇದಿಕೆ ಸಿದ್ಧವಾಗಿದೆ.
20 ಸುತ್ತಿನ ಮತ ಎಣಿಕೆ ಬಳಿಕ, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 21,866 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವೀರಣ್ಣ ಚರಂತಿಮಠ ಈ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.
- ಉಮೇಶ್ ಮೇಟಿ (ಕಾಂಗ್ರೆಸ್) – 97,841 ಮತಗಳು.
- ವೀರಣ್ಣ ಚರಂತಿಮಠ (BJP) – 76,075 ಮತಗಳು.
- ಗೆಲುವಿನ ಅಂತರ: 21,866 ಮತಗಳು.











































































