ದೆಹಲಿ: ಜಗತ್ತಿನಾದ್ಯಂತ ಕ್ರಿಸ್ತ ಜಯಂತಿ ‘ಕ್ರಿಸ್ಮಸ್’ ಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲೆಲ್ಲೂ ಹಬ್ಬ ಸಂಭ್ರಮ ಮನೆಮಾಡಿದೆ. ಮನೆಗಳು, ಅಂಗಡಿ-ಮಳಿಗೆಗಳು ಸಿಂಗಾರಗೊಂಡಿದೆ. ಚರ್ಚ್ಗಳು ಸೇರಿದಂತೆ ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಕೈಂಕರ್ಯಗಳು ಗಮನಸೆಳೆಯಿತು. ಕೇವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿತ ಗಣ್ಯರನೇಕರು ನಾಡಿನ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.
Christmas greetings to everyone! We recall the life and noble teachings of Jesus Christ, which placed topmost emphasis on service, kindness and humility. May everyone be healthy and prosperous. May there be harmony all around.
— Narendra Modi (@narendramodi) December 25, 2021
‘ಸೇವೆ, ದಯೆ ಮತ್ತು ನಮ್ರತೆಗೆ ಹೆಚ್ಚಿನ ಒತ್ತು ನೀಡಿದ ಯೇಸುಕ್ರಿಸ್ತನ ಜೀವನ ಮತ್ತು ಉದಾತ್ತ ಬೋಧನೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿರುವ ಮೋದಿ, ಎಲ್ಲರೂ ಆರೋಗ್ಯ ಮತ್ತು ಐಶ್ವರ್ಯ ಸಿಗಲಿ, ಎಲ್ಲೆಲ್ಲೂ ಸಾಮರಸ್ಯವಿರಲಿ” ಎಂದು ಆಶಿಸಿದ್ದಾರೆ.