ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಮಂಡಿಸಿದ 2022-23 ಸಾಲಿನ ಆಯವ್ಯಯ, ರಾಜ್ಯದ ಎಲ್ಲಾ ಭಾಗಗಳ ಸಮಗ್ರ ಅಭಿವೃದ್ದಿ ದೃಷ್ಟಿಕೋನ ವನ್ನು ಹೊಂದಿದ್ದು, ಪ್ರಗತಿಗೆ ಪೂರಕವಾಗಿದೆ. ಇದೊಂದು, ಅಭಿವೃದ್ಧಿ ಪೂರಕ, ಚಲನಶೀಲ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಭರವಸೆ ಮೂಡಿಸುವ ಆಯವ್ಯಯ ವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಬಣ್ಣಿಸಿದ್ದಾರೆ.
ಮಾರಕ ಕರೋನ ಸಾಂಕ್ರಮಿಕ. ರೋಗದಿಂದ, ಕರ್ನಾಟಕವೂ ಸೇರಿದಂತೆ ಇಡೀ ವಿಶ್ವವೇ ಆರ್ಥಿಕವಾಗಿ ತತ್ತರಿಸಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯವರು, ತಮಗಿರುವ ಅಪಾರ ಆಡಳಿತ ಜ್ಞಾನ ಹಾಗೂ ಸಾಂವಿಧಾನಿಕ ಅನುಭವದ ಸ್ಪರ್ಶವನ್ನು ಆಯವ್ಯಯದಲ್ಲಿ ಕಾಣಿಸಿದ್ದಾರೆ. ಅಭಿವೃದ್ಧಿಯಲ್ಲಿ ಇಡೀ ರಾಷ್ಟ್ರದಲ್ಲಿಯೇ ಮುಂಚೂಣಿ ರಾಜ್ಯ ವಾಗಿರುವ ಕರ್ನಾಟಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು, ಆರ್ಥಿಕತೆಯ ಬೆನ್ನೆಲುಬಾಗಿರುವ, ಮಾನವ ಸಂಪನ್ಮೂಲ, ಇಂಧನ, ನೀರವಾರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಹಿಂದುಳಿದ, ಪರಿಶಿಷ್ಟ ಜಾತಿ ಜನಾಂಗ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ದಿ ಕಾರ್ಯಗಳಿಗೆ, ಹೊಸ ಚೈತನ್ಯ ಒದಗಿಸುವ ನಿಟ್ಟಿನಲ್ಲಿ ಈ ಆಯವ್ಯಯ, ಭರವಸೆಯ ಬೆಳಕು ಎನಿಸಲಿದೆ ಎಂದವರು ಹೇಳಿದ್ದಾರೆ.