ಮೈಸೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸರು ಕೀಚಕ ಪಡೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 24 ರಂದು ರಾತ್ರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಯುವತಿ ಮೇಲೆ ನಾಲ್ವರುವ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಘಟನೆ ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕೃತ್ಯ ನಡೆಸಿದ ಕೀಚಕರ ಹೆಜ್ಜೆ ಗುರುತು ಬೆನ್ನತ್ತಿದ ಪೊಲೀಸರು ಮೂರೇ ದಿನಗಳಲ್ಲಿ ನಾಲ್ವರನ್ನು ಸೆರೆಹಿಡಿದಿದ್ದಾರೆ.
ಟೆಕ್ನಿಕಲ್ ಎವಿಡೆನ್ಸ್ ಮೂಲಕ ಆರೋಪಿಗಳು ಲಾಕ್..
ವಿದ್ಯಾರ್ಥಿನಿ ಮೇಲಿನ ಕಾಮ ಕ್ರೌರ್ಯದ ಪ್ರಕರಣ ಪೊಲೀಸರಿಗೂ ಸವಾಲಾಗಿತ್ತು. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಘಟನಾ ಸಂದರ್ಭದಲ್ಲಿ ಕೀಚಕರಿಂದ ಹಲ್ಲೆಗೊಳಗಾದ ಸ್ಬೇಹಿತನ ಹೇಳಿಕೆ ಆಧರಿಸಿ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದ ಪೊಲೀಸರಿಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಟೆಕ್ನಿಕಲ್ ಎವಿಡೆನ್ಸ್‌ಗಾಗಿ ಹುಡುಕಾಡಿದ ಪೊಲೀಸರು ಘಟನಾ ಸ್ಥಳದಲ್ಲಿ ಕಾರ್ಯಾಚರಿಸಿದ್ಧ ಫೋನ್ ಕಾಲ್‌ಗಳ ಬಗ್ಗೆ ಮಾಹಿತಿ ಪೇರಿಸುದರು. ಈ ಪೈಕಿ ಕೆವು ನಂಬರ್‌ಗಳು ಕೃತ್ಯ ನಡೆದ ನಂತರ ಒಂದು ದಿನ ಮಾತ್ರ ಮೈಸೂರಿನಲ್ಲಿದ್ದವು.
ಈ ನಡುವೆ ಬಸ್ ಟಿಕೆಟೊಂದು ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ. ಈ ಸಾಕ್ಷಿಗಳನ್ನು ಮುಂದಿಟ್ಟು, ಸಾಗಿದ ಪೊಲೀಸರಿಗೆ ಈ ಹೆಜ್ಜೆಗುರುತು ನೆರೆ ರಾಜ್ಯಗಳತ್ತ ದಿಕ್ಕು ತೋರಿಸಿವೆ. ಈ ಸುಳಿವನ್ಬಾಧರಿಸಿ ಪೊಲೀಸರು ಹಲವರನ್ನು ನೆರೆ ರಾಜ್ಯದಲ್ಲಿ ಸೆರೆಹಿಡಿದಿದ್ದಾರೆ. ಇವರಲ್ಲಿ ನಾಲ್ವರು ತನಿಳುನಾಡು ಮೂಲದವರೆಂದು ಹೇಳಲಾಗುತ್ತಿದೆ.