(ವರದಿ: ಆಲ್ವಿನ್ ಎಂ.)
ಬೆಂಗಳೂರು: ಡ್ರಗ್ಸ್ ಮಾಫಿಯಾ ವಿರುದ್ದ ಸಮರ ಸಾರಿರುವ ಬೆಂಗಳೂರು ಪೊಲೀಸರು ಮತ್ತೊಂದು ಯಶೋಗಾಥೆ ಬರೆದಿದ್ದಾರೆ. ಅದರಲ್ಲೂ ಈ ಕಾರ್ಯಾಚರಣೆಯಲ್ಲಿ ಜೆ.ಸಿ.ನಗರ ಠಾಣೆಯ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಇನ್‌ಸ್ಪೆಕ್ಟರ್ ನಾಗರಜ್ ಹಾಗೂ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿನೋದ್ ಜಿರಗಾಳೆ ನೇತೃತ್ವದ ತಂಡ ಇಬ್ಬರು ಅಂತಾರಾಜ್ಯ ಪೆಡ್ಲರ್‌ಗಳನ್ನು ಖೆಡ್ಡಕ್ಕೆ ಕೆಡವಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಠಾಣೆಯ ಪಿಎಸ್‌ಐ ವಿನೋದ್ ಜಿರಗಾಳೆ ನೇತೃತ್ವದ ತಂಡ ಡ್ರಗ್ಸ್ ಮಾಫಿಯಾದ ಮೂಲವನ್ನೇ ಬೇಧಿಸಿದ್ದರು. ಇದೀಗ ಮತ್ತೊಮ್ಮೆ ಇದೇ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಬೆಂಗಳೂರು ಕಮಿಷನರೇಟ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಪ್ರಕರಣ?
ಡ್ರಗ್ಸ್ ಮಾಫಿಯಾ ವಿರುದ್ದ ಸಮರ ಸಜ್ಜಿನ ಕಾರ್ಯಾಚರಣೆ ಕೈಗೊಂಡಿರುವ ಜೆ.ಸಿ.ನಗರ ಠಾಣೆಯ ಪೊಲೀಸರು, ಮಾದಕ ವಸ್ತು ಪೂರೈಕೆ ತಂಡದ ಕಾರಸ್ಥಾನ ಪತ್ತೆಗೆ ಟೊಂಕ ಕಟ್ಟಿ ನಿಂತಿತ್ತು. ಅದಾಗಲೇ ವಿವಿಧ ಹಂತಗಳ ಕಾರ್ಯಾಚರಣೆಗಳಲ್ಲಿ ಹಲವು ಖದೀಮರನ್ನು ಹಿಡಿದು ಜೈಲಿಗಟ್ಟಿರುವ ಈ ಪೊಲೀಸರ ತಂಡ ಈ ಡ್ರಗ್ ಮಾಫಿಯಾ ಹೊರ ರಾಜ್ಯಗಳಿಂದ ನಿರ್ವಹಿಸಲ್ಪಡುತ್ತಿದೆ ಎಂಬುದನ್ನು ದೃಢಪಡಿಸಿತ್ತು.
ಈ ಬಗ್ಗೆ ಜೆಸಿ ನಗರ ಉಪವಿಭಾಗದ ಎಸಿಪಿ ರೀನಾ ಸುವರ್ಣ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ನಾಗರಾಜ್ ಹಾಗೂ ಪಿಎಸ್‌ಐ ವಿನೋದ್ ಜಿರಗಾಳೆ ನೇತೃತ್ವದ ತಂಡ ಮಾದಕ ವಸ್ತು ಪೆಡ್ಲರ್‌ಗಳ ಕಾಂಟ್ಯಾಕ್ಟ್ ಎಲ್ಲೆಲ್ಲಾ ಚಾಚಿದೆ ಎಂಬುದನ್ನು ಪತ್ತೆಹಚ್ಚಿದೆ. ಡ್ರಗ್ಸ್ ಆಗಂತುಕರ ತಂಡ ರಹಸ್ಯವಾಗಿ ಮಾದಕ ವಸ್ತು ಸಾಗಿಸುತ್ತಿದ್ದ ನಿಗೂಢತೆಯನ್ನೂ ಬೇಧಿಸಿತು. ಈ ರಹಸ್ಯ ಕಾರ್ಯಾಚರಣೆಯಲ್ಲಿ ಇಬ್ಬರು ಅಂತಾರಾಜ್ಯ ಪೆಡ್ಲರ್‌ಗಳು ಈ ಪೊಲೀಸರ ಖೆಡ್ಡಕ್ಕೆ ಬಿದ್ದಿದ್ದಾರೆ.
ಕೇರಳ ಮೂಲದ ಸನ್ನದ್ ಮತ್ತು ಮೊಹಮ್ಮದ್ ಬಿಲಾಲ್ ಎಂಬಿಬ್ಬರು ಪೊಲೀಸ್ ಬಲೆಗೆ ಬಿದ್ದಿದ್ದು ಈ ಇಬ್ಬರೂ 24ರ ಹರೆಯದ ತರುಣರು.
ಈ ಆರೋಪಿಗಳು ಮಾದಕ ವಸ್ತು ದಂಧೆಗಾಗಿಯೇ ಐಷಾರಮಿ ಕಾರು ಖರೀದಿಸಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Our fight against drugs continues. Nagaraj,PI JC Nagar nd team has painstakingly followed small lead and finally caught 3 interstate peddlers nd seized 45 KGs Ganja nd 70 grams MDMA,worth 25 Lakhs .@CPBlr has appreciated D efforts of team.@ips_patil @DgpKarnataka @BlrCityPolice pic.twitter.com/37soprH2EV
— DCP North-Bengaluru. (@DCPNorthBCP) September 30, 2020
ಅಂದು ನಗದು ಪುರಸ್ಕಾರ; ಇದೀಗ ಶಹಬ್ಬಾಸ್‌ಗಿರಿ
ತಿಂಗಳ ಹಿಂದೆ ಡ್ರಗ್ಸ್ ಮಾಫಿಯಾ ವಿರುದ್ಧ ಯಶಸ್ವೀ ಕಾರ್ಯಾಚರಣೆ ನಡೆಸಿ ಪೆಡ್ಲರ್‌ಗಳನ್ನು ಜೈಲಿಗಟಗಲ್ಟಿದ್ದ ಜೆ.ಸಿ.ನಗರ ಠಾಣೆಯ ಪಿಎಸ್‌ಐ ವಿನೋದ್ ಜಿರಗಾಳೆ ನೇತೃತ್ವದ ಪೊಲೀಸ್ ತಂಡಕ್ಕೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ನಗದು ಪುರಸ್ಕಾರ ನೀಡಿದ್ದರು. ಇದೀಗ ಇದೇ ಠಾಣೆಯ ಪೊಲೀಸರ ಯಶೋಗಾಥೆಗೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜೆ. ಸಿ ನಗರ ಠಾಣೆಯ ಪೊಲೀಸರು ದಿನಾಂಕ.27.11.2020 ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ TOUBA, IVOIRIENNE ದೇಶದ ಪ್ರಜೆಯಾದ ISSA TOURE ಯನ್ನು ಬಂಧಿಸಿ 1.2ಕೆಜಿ ತೂಕದ ಗಾಂಜಾ ಮತ್ತು 60ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. pic.twitter.com/JnlZz7SoXy
— ACP J C NAGAR (@acpjcnagar) December 1, 2020