ರೀಲ್ಸ್ ಹೆಸರಲ್ಲಿ ಸಾಹಸಕ್ಕೆ ಮುಂದಾಗಿ ಅನಾಹುತಗಳಿಗೆ ಆಹಾರವಾಗಿರುವ ಘಟನೆಗಳು ಒಂದೆರಡಲ್ಲ. ಯುವ ಸಮುದಾಯ ಮಾಡುತ್ತಿರುವ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ.
When you pay attention to Google Maps.
— Figen (@TheFigen_) July 1, 2024
ಇಲ್ಲೊಬ್ಬ ಯುವಕ ಈ ರೀಲ್ಸ್ ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ರೀಲ್ಸ್ ಸಾಹಸಕ್ಕಾಗಿ ಈ ಯುವಕ ಸ್ಕೂಟರ್ ನೊಂದಿಗೆ ಸಮುದ್ರಕ್ಕೆ ಇಳಿದಿದ್ದಾನೆ. ದೈತ್ಯ ಅಲೆಗಳು ಬರುತ್ತಿದ್ದಂತೆಯೇ ಸ್ಕೂಟರ್ ಬಿಟ್ಟು ಇಳಿದಿದ್ದಾನೆ. ಬಳಿಕ ಅದೇ ಸ್ಕೂಟರ್ ಏರಿ ದಾದಾ ಸೇರಿದ್ದಾನೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ಹುಚ್ಚಾಟಕ್ಕೆ ನೆಟ್ಟಿಗರು ತಮ್ಮದೇ ದಾಟಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.