ಹಾಸನ: ರಾಜ್ಯದ ಯುವ ಐಪಿಎಸ್ ಅಧಿಕಾರಿ ಹರ್ಷ ಬರ್ಧನ್ ಅವರು ಹಾಸನ ಬಳಿ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಕರ್ನಾಟಕ ಕ್ಯಾಡರ್ ನ 2023 ನೇ ಸಾಲಿನ ಐಪಿಎಸ್ ಅಧಿಕಾರಿ ಹರ್ಷ ಬರ್ಧನ್ ಅವರು ಕೆಪಿಎ ತರಬೇತಿ ಮುಗಿಸಿ ಭಾನುವಾರ ರಾತ್ರಿ ಹಾಸನಕ್ಕೆ ಕರ್ತವ್ಯಕ್ಕೆ ವರದಿ ಮಾಡಲು ತೆರಳಿಲುತ್ತಿದ್ದರು. ಮಾರ್ಗ ಮಧ್ಯೆ ವಾಹನ ಅಪಘಾತಕ್ಕೀಡಾಗಿ ಈ ಯುವ ಐಪಿಎಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದರು. ಕೀಡಲೇ ಅವರನ್ನು ಹಾಸನದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳೊಸಿವೆ.
ಹರ್ಷಬರ್ಧನ್ ಅವರ ತಂದೆ ಅಖಿಲೇಶ್ ಎಸ್ ಡಿ ಎಂ (ಎಸಿ ಕೇಡರ್ ಅದಿಕಾರಿ) ಮದ್ಯಪ್ರದೇಶ್( ಮೂಲತಃ ಬಿಹಾರದವರು. ಬಿಇ ಸಿವಿಲ್ ಇಂಜಿನಿಯರಿಂಗ್ ಓದಿಕೊಂಡಿದ್ದ ಹರ್ಷ, 2023 ರ ಬ್ಯಾಚ್ ಐಪಿಎಸ್ ಅದಿಕಾರಿಯಾಗಿ ಕರ್ನಾಟಕದಲ್ಲಿ ಪ್ರಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ ನಾಲ್ಕು ವಾರಗಳ ತರಬೇತಿ ಪೂರ್ಣಗೊಳಿಸಿದ್ದ ಹರ್ಷ, ಆರು ತಿಂಗಳು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಲಿದ್ದರು. ಆದರೆ ಅದಾಗಲೇ ವಿಧಿಯಾಟ ಅವರನ್ನು ಬಲಿತೆಗೆದುಕೊಂಡಿದ್ದು, ಇಡೀ ಪೊಲೀಸ್ ಇಲಾಖೆ ದುಃಖದ ಮಡುವಿನಲ್ಲಿದೆ.