ಬೆಂಗಳೂರು: ಸಚಿವ ನಿರಾಣಿ ಹಾಗೂ ರಾಜ್ಯ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಕ್ಸಮರ ಬಿಜೆಪಿ ಪಾಲಿಗೆ ಸವಾಲೆಂಬಂತಾಗಿದೆ. ಇದೇ ವೇಳೆ, ಮುರುಗೇಶ್ ನಿರಾಣಿಯವರ ವೈಫಲ್ಯಗಳ ವಿರುದ್ದ ವಾಗ್ಧಾಳಿ ನಡೆಸುತ್ತಿರುವ ಯತ್ನಾಳ್ ಅವರ ವಾಕ್ ವೈಖರಿಗೆ ಬ್ರೇಕ್ ಮಾಡಲು ನಾಯಕರು ಮುಂದಾಗಿದ್ದಾರೆ. ಈ ಸಂಬಂಧ ಪಕ್ಷದ ಶಿಸ್ತು ಸಮಿತಿಯು ಯತ್ನಾಳ್ ಅವರಿಗೆ ನೋಟೀಸ್ ನೀಡುವ ಮೂಲಕ ಅಚ್ಚರಿಯ ನಡೆಗೆ ಮುಂದಾಗಿದೆ.
ಇದೇ ವೇಳೆ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಅವರು ಯತ್ನಾಳ್ ಬಗ್ಗೆ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ್, ಪಕ್ಷದ ವಿರುದ್ಧ ಇದ್ದರೆ ಅದರದೇ ಆದ ಕ್ರಮವನ್ನು ಅವರು ಎದುರಿಸಬೇಕಾಗುತ್ತದೆ ಎಂದರು.. ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಇರಬೇಕಾಗುತ್ತದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಕಾಂಗ್ರೆಸ್ ಎಲ್ಲ ಕಡೆ ಮುಳುಗುವ ಹಡಗಾಗಿದೆ. ಅಪ್ರಸ್ತುತ ಪಕ್ಷವಾಗಿದೆ. ಆ ಪಕ್ಷದವರಿಗೆ ಸ್ಪಷ್ಟತೆ ಇಲ್ಲ. ಕೋವಿಡ್ ಲಸಿಕೆ ಪಡೆಯಬೇಡಿ ಎಂದ ಪಕ್ಷವದು. ಈ ಮಟ್ಟದಲ್ಲಿ ‘ನಾ ನಾಯಕಿ’ ಕಾರ್ಯಕ್ರಮ ಅದಲ್ಲ. ನಾ ನಾಲಾಯಕ್ ಕಾರ್ಯಕ್ರಮವದು. ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ತಿಳಿಸಿದರು.







































































