ಬೆಂಗಳೂರು: ರಾಜಧಾನಿ ಬೆಂಗಳೂರು ಇಂದು ಕಾಂಗ್ರೆಸ್ ವನಿತೆಯರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ರಾಜ್ಯ ರಾಜಕಾರಣದಲ್ಲಿ ಅಪರೂಪ ಎಂಬಂತೆ ಬೆಂಗಳೂರಿನಲ್ಲಿ ಮಹಿಳಾ ಮಣಿಗಳದ್ದೇ ಸಮಾವೇಶ ಗಮನಸೆಳೆಯಿತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಈ ಸಮಾವೇಶದಲ್ಲಿ ಎಲ್ಲರ ಕುತೂಹಲದ ಕೇಂದ್ರ ಬಿಂದುವಾದರು.
ಈ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಇದೇ ವೇಳೆ ಮಹಿಳೆಯರಿಗೆ ಹಣ ಹಂಚುತ್ತಿದ್ದ ವೀಡಿಯೋ ಸೆರೆಯಾಗಿದೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ?’ ಎಂದು ಪ್ರಶ್ನಿಸಿದೆ.
‘ನಾಯಕಿ’ ಕಾರ್ಯಕ್ರಮಕ್ಕೂ 2000 ರೂ. ಕೊಟ್ಟೇ ಕರೆತರಲಾಗಿತ್ತು! ಪ್ರಿಯಾಂಕಾ ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ ಗೃಹಲಕ್ಷ್ಮಿ ಯೋಜನೆ ಇರಬೇಕು ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ?
‘ನಾಯಕಿ’ ಕಾರ್ಯಕ್ರಮಕ್ಕೂ 2000 ರೂ. ಕೊಟ್ಟೇ ಕರೆತರಲಾಗಿತ್ತು! ಶ್ರೀಮತಿ @priyankagandhi ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ ಗೃಹಲಕ್ಷ್ಮಿ ಯೋಜನೆ ಇರಬೇಕು. #PriyankaKeFakePromises pic.twitter.com/MCleOTpeKn
— BJP Karnataka (@BJP4Karnataka) January 16, 2023






































































