ಬೆಂಗಳೂರು; ನೂತನ ವರ್ಷಾಚರಣೆ ಸಂದರ್ಭದಲ್ಲಿ ನಾಡಿನ ದೆವಾಲಯಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಗಮನಸೆಳೆದವು.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿಯ ಚಿನ್ನಯ್ಯನ ಪಾಳ್ಯದಲ್ಲಿರುವ ಶ್ರೀ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜಾ ವೈಭವ ಗಮನಸೆಳೆಯಿತು.
ನಾಡಿನ ಒಳಿತಿಗಾಗಿ, ವಿಶೇಷ ಕೈಂಕರ್ಯ ನೆರವೇರಿತು. ನಾಡಿನ ಸುಭೀಕ್ಷೆಯನ್ನು ಆಶಿಸಿ ಶ್ರೀ ದೇವಿಗೆ ಮಾಡಲಾದ ಮುತ್ತಿನ ಹಾರ, ಆಭರಣಗಳ ಅಲಂಕಾರ ಭಕ್ತ ಸಾಗರದ ಕಣ್ಮನ ಸೆಳೆಯುತ್ತಿತ್ತು. ಇಡೀ ದಿನ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.