ಬೆಂಗಳೂರು: ಒಂದಿಲ್ಲೊಂದು ಅವಾಂತರ, ವಿವಾದಗಳಿಂದ ಸುದ್ದಿಯ ಕೇಂದ್ರಬಿಂದು ವಾಗುತ್ತಿರುವ ಶಿವಮೊಗ್ಗ ಜಿಲ್ಲೆ ಇದೀಗ ಜೋಗದ ವಿಚಾರದಿಂದಾಗಿ ಮತ್ತೆ ಸುದ್ದಿಯ ಮುನ್ನಲೆಗೆ ಬಂದಿದೆ. ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಅಧಿಕಾರಿಗಳು ಜಲಾಶಯದ ನೀರನ್ನೇ ವ್ಯರ್ಥಮಾಡಿದರೆಂಬ ಸಂಗತಿ ವಿವಾದವನ್ನು ಹುಟ್ಟುಹಾಕಿದೆ.
ರಾಜ್ಯಪಾಲರನ್ನು ಮೆಚ್ಚಿಸೋದಕ್ಕಾಗಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ಅಧಿಕಾರಿಗಳ ಸೂಚನೆಯಂತೆ ಲಿಂಗನಮಕ್ಕಿ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿತ್ತು ಎಂಬುದೇ ಇದೀಗ ಸುದ್ದಿಯಾಗಿರೋದು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿವ ಸಂಬಂಧ ಶಿವಮೊಗ್ಗ ಜಿಲ್ಲೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಜೋಗ ಜಲಪಾತ ವೀಕ್ಷಣೆಯ ಅಭಿಲಾಷೆ ವ್ಯಕ್ತಪಡಿಸಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಜೋಗದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎನ್ನಲಾಗಿದ್ದು, ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಸೌಂದರ್ಯ ಹೆಚ್ಚಿಸುವ ಸಾಹಸಕ್ಕಿಳಿದ ಅಧಿಕಾರಿಗಳು ಲಿಂಗನಮಕ್ಕಿ ಜಲಾಶಯದಿಂದ ನೂರಾರು ಕ್ಯೂಸೆಕ್ ಕ್ಯೂಸೆಕ್ಸ್ ನೀರು ಹೊರಬಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ನೀರು ಜೋಗ ಜಲಪಾತ ಸೇರುವಷ್ಟರಲ್ಲಿ ರಾಜ್ಯಪಾಲರು ಅಲ್ಲಿಂದ ನಿರ್ಗಮಿಸಿದ್ದರು.
कर्नाटक के शिमोगा जिले में स्थित भारत के सुंदरतम जोगफाल झरने के दृश्य आपके साथ साँझा कर रहा हुँ।
अतुल्य भारत की प्राकृतिक सुंदरता से औत प्रोत यह राज्य पर्यटन की दृष्टि से बहुत सम्पन्न हैं , एक बार यहाँ जोगफाल झरने की आनंददायक यात्रा ज़रूर करें। @incredibleindia @KarnatakaWorld pic.twitter.com/E5JITKUpAO
— Thaawarchand Gehlot (@TCGEHLOT) November 25, 2021
ರಾಜ್ಯಪಾಲ ಗೆಹ್ಲಾಟ್ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಅಧಿಕೃತವಾಗಿ ಕ್ರಮ ಕೈಗೊಂಡಿದ್ದರೆ ವಿವಾದವಾಗುತ್ತಿರಲಿಲ್ಲ. ಜಲಾಶಯದಿಂದ ನೀರನ್ನು ಹೊರಬಿಟ್ಟ ಉದ್ದೇಶವೂ ಈಡೇರಿಲ್ಲ. ಹಾಗಾಗಿಯೇ ಈ ವಿಚಾರ ಚರ್ಚೆಗೆ ಗ್ರಾಸವಾಗಿರುವುದು.
ಈ ನಡುವೆ, ರಾಜ್ಯಪಾಲರು ಜೋಗ ಜಲಪಾತ ವೀಕ್ಷಣೆಯ ಫೊಟೋ ವೀಡಿಯೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಅತಿ ಎತ್ತರದ ಜೋಗ ಜಲಪಾತ ಮತ್ತು ಸುತ್ತಮುತ್ತಲಿನ ನಿಸರ್ಗದ ಸೌಂದರ್ಯವನ್ನು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಲ್ಹೋಟ್ ಅವರು ವೀಕ್ಷಿಸಿ ಸಂತಸ ಪಟ್ಟರು.@incredibleindia @BSBommai @KarnatakaWorld @PIBBengaluru @ pic.twitter.com/LvhwXZSW9y
— Thaawarchand Gehlot Office (@TcGehlotOffice) November 25, 2021