ಬೆಂಗಳೂರು: ತೀವ್ರ ಕುತೂಹಲ ಕೆರಳಿಸುವ ರಾಜ್ಯ ವಿಧಾನ ಪರಿಷತ್ ಫೈಟ್‌ಗೆ ಬಿಜೆಪಿ ಸನ್ನದ್ಧವಾಗಿದೆ. ಗೆಲ್ಲುವ ಕುದುರೆಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಕಮಲ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ರಾಜ್ಯದ 20 ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಪೈಕಿ 20 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಕೋಟಾ ಶ್ರೀನಿವಾಸ ಪೂಜಾರಿ, ಪ್ರದೀಪ್ ಶೆಟ್ಟರ್ ಸೇರಿ ಹಲವರನ್ನು ಮತ್ತೊಮ್ಮೆ ಕಣಕ್ಕಿಳಿಯಲು ಬಿಜೆಪಿ ತೀರ್ಮಾನಿಸಿದೆ.
ಹುರಿಯಾಳುಗಳ ಪಟ್ಟಿ ಹೀಗಿದೆ:
- ಕೊಡಗು: ಸುಜಾ ಕುಶಾಲಪ್ಪ
- ದಕ್ಷಿಣ ಕನ್ನಡ: ಕೋಟ ಶ್ರೀನಿವಾಸ ಪೂಜಾರಿ
- ಚಿಕ್ಕಮಗಳೂರು: ಎಂಕೆ ಪ್ರಾಣೇಶ್
- ಶಿವಮೊಗ್ಗ: ಡಿಎಸ್ ಅರುಣ್
- ಧಾರವಾಡ: ಪ್ರದೀಪ್ ಶೆಟ್ಟರ್
- ಬೆಳಗಾವಿ: ಮಹಾಂತೇಶ್ ಕವಟಗಿಮಠ
- ಕಲಬುರಗಿ: ಬಿ.ಜಿ ಪಾಟೀಲ್
- ಚಿತ್ರದುರ್ಗ: ಕೆ.ಎಸ್.ನವೀನ್
- ಮೈಸೂರು: ರಘು ಕೌಟಿಲ್ಯ
- ಹಾಸನ: ವಿಶ್ವನಾಥ್
- ಉತ್ತರ ಕನ್ನಡ: ಗಣಪತಿ ಉಳ್ವೇಕರ್
- ಬೀದರ್: ಪ್ರಕಾಶ್ ಖಂಡ್ರೆ
- ಬೆಂಗಳೂರು: ಹೆಚ್.ಎಸ್.ಗೋಪಿನಾಥ ರೆಡ್ಡಿ
- ಮಂಡ್ಯ: ಮಂಜು ಕೆ.ಆರ್.ಪೇಟೆ
- ಕೋಲಾರ: ಕೆಎನ್ ವೇಣುಗೋಪಾಲ್
- ರಾಯಚೂರು: ವಿಶ್ವನಾಥ್ ಬನಹಟ್ಟಿ
- ಬೆಂಗಳೂರು ಗ್ರಾ.: ಬಿ.ಎಂ. ನಾರಾಯಣಸ್ವಾಮಿ
- ಬಳ್ಳಾರಿ: ವೈ.ಎಂ. ಸತೀಶ್
- ತುಮಕೂರು: ಎನ್ ಲೋಕೇಶ್
- ವಿಜಯಪುರ: ಪಿ.ಹೆಚ್.ಪೂಜಾರ್