i9ದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ವರ್ಷದ ಪುಣ್ಯತಿಥಿ ಯನ್ನು ಇಂದು ಆಚರಿಸಲಾಯಿತು. ಅಜಾತ ಶತ್ರು ಎಂದೇ ಜನಜನಿತರಾಗಿದ್ದ ವಾಜಪೇಯಿ ಅವರು ಭಾರತ ರತ್ನ ಪ್ರಶಸ್ತಿ ಪುರಸ್ಕೃತರು.
ದೆಹಲಿಯಲ್ಲಿರುವ ಅಟಲ್ ಜಿ ಯವರ ಸ್ಮಾರಕ ‘ಸದೈವ್ ಅಟಲ್’ನಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಗೌರವ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರೂ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕ ಸ್ಥಳಕ್ಕೆ ತೆರಳಿ ಗೌರವ ಸಮರ್ಪಿಸಿದರು.