ಬೆಂಗಳೂರು: 15ನೇ ವರ್ಷದಿಂದ 18ನೇ ವರ್ಷದೊಳಗಿನ ಮಕ್ಕಳ ಕೋವಿಡ್-19′ ಲಸಿಕಾ ಅಭಿಯಾನ’ಕ್ಕೆ ಚಾಲನೆ ಸಿಕ್ಕಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ, ಹೆಬ್ಬಾಳ ವಾರ್ಡ್ ವ್ಯಾಪ್ತಿಯ ಜೆ. ಸಿ ನಗರದ ಸರಕಾರಿ ಶಾಲೆಯಲ್ಲಿ ’15ನೇ ವರ್ಷದಿಂದ 18ನೇ ವರ್ಷದೊಳಗಿನ ಮಕ್ಕಳ ಕೋವಿಡ್-19′ ಲಸಿಕಾ ಅಭಿಯಾನ’ಕ್ಕೆ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ, ದೇಶದ ಎಲ್ಲ ನಾಗರಿಕರನ್ನು ಕೋವಿಡ್ ಸೋಂಕಿನಿಂದ ರಕ್ಷಿಸಿಸುವ ನಿಟ್ಟಿನಲ್ಲಿ ಕಾರ್ಯಚರಿಸುತ್ತಿದ್ದು, ಇಂದಿನಿಂದ ದೇಶದಾದ್ಯಂತ ಮಕ್ಕಳ (15ನೇ ವರ್ಷದಿಂದ 18 ವರ್ಷದೊಳಗಿನವರ) ಲಸಿಕಾಕರಣವನ್ನು ಆರಂಭಿಸಿರುವುದು ಅಭಿನಂದನೀಯ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ನಮ್ಮೆಲ್ಲರ ಸುರಕ್ಷೆತೆಗಾಗಿ ಅವಿರತ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದ ಸಚಿವರು, ದೇಶದ ಕೋವಿಡ್ ವಿರುದ್ದದ ಸಮರದಲ್ಲಿ ಸಾರ್ವಜನಿಕರಾದ ನಮ್ಮೆಲ್ಲರ ಜವಾಬ್ದಾರಿ ತುಂಬ ದೊಡ್ಡದು, ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ನಮ್ಮ-ನಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.